ಆರಂಬೋಡಿ: ಇಲ್ಲಿಯ ಹೊಕ್ಕಾಡಿಗೋಳಿ ಕೂಡುರಸ್ತೆಯ ಅನುಗ್ರಹ ಸ್ಕ್ವೇರ್ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಶ್ರೀಮಾ ಮೆಡಿಕಲ್ಸ್ ಇತ್ತೀಚೆಗೆ ಶುಭಾರಂಭಗೊಂಡಿತು.
ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳೆಪ್ಪಾಡಿಗುತ್ತು ಅವರು ನೂತನ ಔಷಧ ಮಳಿಗೆಯನ್ನು ಉದ್ಘಾಟಿಸಿ, ಗ್ರಾಮೀಣ ಭಾಗದ ಜನರ ಅವಶ್ಯಕತೆಯನ್ನು ಮನಗಂಡು ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಈ ಸಂಸ್ಥೆಯನ್ನು ಆರಂಭಿಸಿರುವುದು ಶ್ಲಾಘನೀಯ. ಸಂಸ್ಥೆಯು ಜನೋಪಯೋಗಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ವಿದ್ವಾನ್ ಪ್ರಕಾಶ್ ಆಚಾರ್ಯ ಅವರು ದೀಪ ಬೆಳಗಿಸಿ ಆಶೀರ್ವಚನ ನೀಡುತ್ತಾ, ಈ ಪ್ರದೇಶದ ಬಹುಕಾಲದ ನಿರೀಕ್ಷೆಯಾಗಿದ್ದ ಮೆಡಿಕಲ್ ಸ್ಟೋರ್ ಆರಂಭಿಸಿರುವ ಮಾಲಿಕರ ಪ್ರಯತ್ನಕ್ಕೆ ಪೂಂಜದ ಆರಾಧ್ಯದೇವಿ ಹಾಗೂ ಮಾಗಣೆಯ ದೈವಗಳ ಸಂಪೂರ್ಣ ಅನುಗ್ರಹ ದೊರೆಯಲಿ ಎಂದರು.
ಸಿದ್ದಕಟ್ಟೆ ಪ್ರಾ.ಕೃ.ಪಸ. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನಿರ್ದೇಶಕರುಗಳಾದ ದಿನೇಶ್, ಶಿವಗೌಡ, ವೀರಪ್ಪ ಸತೀಶ್ ಪೂಜಾರಿ, ಕೆ.ಎಂಎಫ್. ನಿರ್ದೇಶಕ ಪ್ರಭಾಕರ ಎಚ್., ಸಿದ್ದಕಟ್ಟೆ ಜನಪ್ರಿಯ ವೈದ್ಯರಾದ ಡಾ. ಸುದೀಪ್, ಡಾ. ಕೃಷ್ಣಮೂರ್ತಿ, ಡಾ. ಪ್ರಭಾಚಂದ್ರ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಬೆಳ್ತಂಗಡಿ ತಾಲೂಕು ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಉದಯ ಕುಮಾರ್ ಜೈನ್ ಭಾಗವಹಿಸಿ ಶುಭ ಹಾರೈಸಿದರು.
ಆರಂಬೋಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಸ್ತಾವಣೆಯೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆಯ ಮಾಲಕರಾದ ಪಶುಪಾಲನ ಇಲಾಖೆಯ ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ. ಶ್ರೀಧರ ಶೆಟ್ಟಿ, ಶ್ರೀಮತಿ ಮಂದಾರತಿ ಎಸ್. ಶೆಟ್ಟಿ, ಶಮಂತ್ ಶೆಟ್ಟಿ, ಸುಮಂಗಲ ಶಮಂತ್ ಹಾಗೂ ಬಂಧುಮಿತ್ರರು ಎಲ್ಲಾ ಅತಿಥಿ ಗಣ್ಯರನ್ನು ಸತ್ಕರಿಸಿದರು.





