ಕಿರುತೆರೆ ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ನಂದಿನಿ ಸಿಎಂ ಅವರು ಮೃತರಾಗಿದ್ದಾರೆ. ಕನ್ನಡದ ಧಾರಾವಾಹಿಗಳು ಮಾತ್ರವಲ್ಲದೇ ತಮಿಳಿನ ಸೀರಿಯಲ್ನಲ್ಲೂ ನಂದಿನಿ ಅವರು ಅವಕಾಶ ಪಡೆದಿದ್ದರು. ಆದರೆ ಈಗ ಅವರು ಬೆಂಗಳೂರಿನ ಆರ್ಆರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಗಳಲ್ಲಿ ನಂದಿನಿ ಅವರು ನಟಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ನಂದಿನಿ ಅವರು ನಾಯಕಿಯ ಪಾತ್ರ ಮಾಡುತ್ತಿದ್ದರು. ದುರ್ಗಾ ಮತ್ತು ಕನಕ ಎಂಬ ಪಾತ್ರಗಳ ಮೂಲಕ ಅವರು ವೀಕ್ಷಕರಿಗೆ ಪರಿಚಿತರಾಗಿದ್ದರು. ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಶೋಕ ಆವರಿಸಿದೆ.






