ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ (ರಿ.) ವೇಣೂರು ಇದರ ಸದಸ್ಯರು ಹಾಗೂ ಹಿತೈಷಿಗಳ ವತಿಯಿಂದ ವೇಣೂರು ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪವನ್ ಎಂಬ ವಿದ್ಯಾರ್ಥಿಗೆ ಆರೋಗ್ಯ ನಿಮಿತ್ತ ಆಸ್ಪತ್ರೆಗೆ ತೆರಳಿ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಕೆ. ವಿಜಯ ಗೌಡ, ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು, ಕೋಶಾಧಿಕಾರಿ ಪ್ರಶಾಂತ್ ಹೆಗ್ಡೆ, ಟ್ರಸ್ಟಿಗಳಾದ ನೇಮಯ್ಯ ಕುಲಾಲ್, ಕಾರ್ತಿಕ್, ಗಿರೀಶ್ ಕೆ. ಎಸ್. ಉಪಸ್ಥಿತರಿದ್ದರು.




