ಅಳದಂಗಡಿ: ಬಡಗಕಾರಂದೂರು ಸ.ಹಿ.ಪ್ರಾ. ಶಾಲೆಗೆ ಸಂದೀಪ್ ಸುಂದರ್ ನೀರಲ್ಕೆ ಅವರು ಎರಡು ಕಂಪ್ಯೂಟರ್ ಟೇಬಲನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಂದೀಪ್ ಸುಂದರ್ ನೀರಲ್ಕೆ ಅವರು ಶಾಲೆಯ ಎಸ್ಡಿಎಂಸಿ ಮಾಜಿ ಸದಸ್ಯರಾಗಿದ್ದು, ಟೀಂ ಅಭಯಹಸ್ತ ಚಾರಿಟೇಬಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಬೆಳ್ತಂಗಡಿ ಇದರ ಪ್ರಧಾನ ಸಂಚಾಲಕರಾಗಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಇವರು ಶಾಲೆಯ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ.

ಅವರ ಪತ್ನಿ ಶ್ರೀಮತಿ ಚೇತನ ಸಂದೀಪ್ ಹಾಗೂ ಪುತ್ರಿ ಕು. ಶ್ರೀಮಾನ್ಯ ಅವರು ಟೇಬಲ್ಗಳನ್ನು ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷರಾದ ಶಶಿಕಾಂತ ನಾಯಕ್, ಸದಸ್ಯ ಆನಂದ ಪೂಜಾರಿ, ಹಿರಿಯ ವಿದ್ಯಾರ್ಥಿ ಉಮೇಶ್ ಸುವರ್ಣ ಹಾಗೂ ಚಂದ್ರಶೇಖರ್ ರವರು ಉಪಸ್ಥಿತರಿದ್ದರು.



