ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಭಕ್ತಿಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ.
ಬೆಂಗಳೂರು, ಜೂ. 3: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧೀಸಿದ್ದು, ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪ್ರಮಾಣ ಸ್ವೀಕರಿಸಿರೋದು ಗಮನ ಸೆಳೆದಿದೆ. ತಮ್ಮ ಜೀವನದ ಮಹತ್ವದ ಘಟ್ಟದ ವೇಳೆ ತಮ್ಮ ಆರಾಧ್ಯ ದೈವವಾದ ಅಜ್ಜಯ್ಯನನ್ನು ನೆನೆದಿರೋದು ಡಿ.ಕೆ. ಶಿವಕುಮಾರ್ಗೆ ಅವರ ಮೇಲಿರುವ ನಂಬಿಕೆ ಎಂತಹದ್ದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವೇದಿಕೆಯಲ್ಲಿ ಇಡಲಾಗಿದ್ದ ಅಜ್ಜಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಸಿದ ಬಳಿಕೆಯೇ ಕರ್ನಾಟಕ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಶಿವಕುಮಾರ್, ತಡರಾತ್ರಿಯವರೆಗೂ ಅಲ್ಲಿಯೇ ಸಮಯ ಕಳೆದಿದ್ದರು.
ಎಲ್ಲಿದೆ ಈ ಅಜ್ಜಯ್ಯನ ಮಠ?
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠ (ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ) ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಈ ಮಠವನ್ನು ಸ್ಥಳೀಯವಾಗಿ ‘ಅಜ್ಜಯ್ಯನ ಮಠ’ ಎಂದೂ ಕರೆಯಲಾಗುತ್ತದೆ. ಈ ಮಠವು ಕರ್ನಾಟಕದ ಪ್ರಮುಖ ರಾಜಕಾರಣಿಗಳ ನೆಚ್ಚಿನ ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್ ಸೇರಿ ಹಲವರು ಇಲ್ಲಿನ ಭಕ್ತರಾಗಿದ್ದಾರೆ.





