ಬೆಳ್ತಂಗಡಿ: ಕೋಳಿಗೆ ತಾತ್ಕಾಲಿಕ ಕೆ.ಜಿ. ರೂ.10 ಜಾರಿಗೊಳಿಸಲು ವಿಧಾನಸಭೆಯ ಚರ್ಚಿಸಿ ಸರ್ಕಾರದ ಗಮನ ಹರಿಸಬೇಕೆಂದು ಒತ್ತಾಯಿಸಿ ಶಾಸಕ ಹರೀಶ್ ಪೂಂಜ ಅವರಿಗೆ ಕೋಳಿ ಸಾಕಾಣಿಕೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದರು.


ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಬೇಕೆಂದು ಶಾಸಕರಿಗೆ ಮನವಿ ಪತ್ರದಲ್ಲಿ ಸಲ್ಲಿಸಲಾಗಿದೆ. ತಕ್ಷಣವೇ ಸಮಿತಿ ರಚನೆಯಾಗಬೇಕು, ಕೋಳಿ ಸಾಕಾಣಿಕೆ ರೈತರು ಮತ್ತು ಖಾಸಗಿ ಕಂಪನಿಯವರ ಜೊತೆ ಸರ್ಕಾರ ಕೈಜೋಡಿಸಿ ಬೆಲೆ ನಿಯಂತ್ರಣ ಕೋಳಿ ಮರಿ ಆಹಾರ ಔಷಧಿ ಮತ್ತು ಲಸಿಕೆ ಇವುಗಳ ಬಗ್ಗೆ ನಿಯಂತ್ರಣ ಸಾಧಿಸಲು ಸರ್ಕಾರ ಮಧ್ಯಸ್ಥಿಕೆ ವಹಿಸಿ , ಕುಕ್ಕುಟ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕು. ಎಂದು ಇನ್ನು ಅನೇಕ ಬೇಡಿಕೆಗಳನ್ನು ಶಾಸಕ ಹರೀಶ್ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕ ಹರೀಶ್ ಅವರು ಪಶುಪಾಲನ ಇಲಾಖೆ ಅಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ಸಂಗ್ರಹಿಸಿ ನಂತರ ವಿಧಾನಸಭೆ ಅಧಿವೇಶನದ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಕೋಳಿ ಸಾಕಾಣಿಕೆ ರೈತರ ಸಮಸ್ಯೆಗಳನ್ನು ಚರ್ಚೆ ಮಾಡಲು ಸಮಯ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷಮಾಭಿವೃದ್ಧಿ ಸಂಘದ ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು.



