ಪ್ರತೀ ಹಿಂದೂ ಮನೆಯು ದೇಗುಲದೊಂದಿಗೆ ಜೋಡಣೆಯಾಗಬೇಕೆಂಬ ಸಂಕಲ್ಪ: ಜಯಂತ್ ಕೋಟ್ಯಾನ್




ಆರಂಬೋಡಿ: ಹೊಸಂಗಡಿ ಗ್ರಾಮದ ಪೆರಿಂಜೆ ಬಲ್ಲಂಗೇರಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, 2027ರ ಫೆ. 7ರಿಂದ 10ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಭಕ್ತಾಧಿಗಳ ಪೂರ್ವಭಾವಿ ಸಮಾಲೋಚನ ಸಭೆಯು ಇದೇ ನ. 29ರಂದು ಅಪರಾಹ್ನ 2-30ರಿಂದ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಇದರ ಪದಾಧಿಕಾರಿಗಳು ಗುಂಡೂರಿ ಶ್ರೀ ಸತ್ಯನಾರಾಯಣ ಭಜನ ಮಂದಿರದಲ್ಲಿ ನ.25ರಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್ ಅವರು ಮಾತನಾಡಿ, ಅಪರೂಪದ ಕ್ಷೇತ್ರವಾಗಿರುವ ಬಲ್ಲಂಗೇರಿ ಸೂರ್ಯನಾರಾಯಣ ದೇಗುಲದ ಬ್ರಹ್ಮಕಲಶೋತ್ಸವದ ಯೋಗ-ಭಾಗ್ಯ ನಮಗೆ ಕೂಡಿ ಬಂದಿದೆ. ಇದರ ಪೂರ್ವಭಾವಿ ಸಭೆಗೆ ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ ಹಾಗೂ ಕರಿಮಣೇಲು ಗ್ರಾಮದ ಪ್ರತೀ ಮನೆಯಿಂದ ಓರ್ವ ಪೂರ್ವಭಾವಿ ಸಭೆಗೆ ಹಾಜರಾಗಬೇಕು ಎಂಬುದು ನಮ್ಮ ನಿಲುವು. ಪ್ರತೀ ಹಿಂದೂ ಮನೆಯು ದೇಗುಲದೊಂದಿಗೆ ಜೋಡಣೆ ಆಗಬೇಕು ಎಂಬ ಸಂಕಲ್ಪ ನಮ್ಮದಾಗಿದೆ ಎಂದರು.
ಗುಂಡೂರಿ ಗ್ರಾಮದ ಪ್ರತೀ ಮನೆಗೆ ಕರಪತ್ರ ಹಂಚುವ ಜವಾಬ್ದಾರಿಯನ್ನು ನಿತೀಶ್ ಗುಂಡೂರಿ ಹಾಗೂ ದಯಾನಂದ ದೇವಾಡಿಗ ಅವರಿಗೆ ನೀಡಲಾಯಿತು.
ಸಭೆಯಲ್ಲಿ ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷರಾದ ಕಿರಣ್ ಕುಮಾರ್ ಮಂಜಿಲ, ರೊ. ರಾಘವೇಂದ್ರ ಭಟ್, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರಮೇಶ್ ಕುಂಜಾಡಿ, ಹರೀಶ್ ಹರಿಓಂ ನಿಲಯ, ಭಜನಾ ಮಂದಿರದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಹರೀಶ್ ಕುಮಾರ್ ಪೊಕ್ಕಿ, ನವೀನ್ ಪೂಜಾರಿ ಪಚ್ಚೇರಿ, ಕುಮಾರು ಹೆಗ್ಡೆ, ಜಯರಾಮ್ ಹೆಗ್ಡೆ, ರಾಜು ಪೂಜಾರಿ ಮತ್ತಿತರರು ಇದ್ದರು.

