ಬೆಂಗಳೂರು/ಮಂಗಳೂರು: ಕನ್ನಡಪ್ರಭ-ಸುವರ್ಣ ನ್ಯೂಸ್ ವತಿಯಿಂದ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ನಡೆದ ಸಮಾರಂಭದಲ್ಲಿ ‘ಸುವರ್ಣ ಕನ್ನಡಿಗ-2026’ ಪ್ರಶಸ್ತಿಯನ್ನು ಮಂಗಳೂರು ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಹೆಲ್ತ್ ಕೇರ್ ಕರ್ನಾಟಕ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಲ. ಅನಿಲ್ ದಾಸ್ ಅವರಿಗೆ ಪ್ರದಾನ ಮಾಡಲಾಯಿತು.
ಲಯನ್ ಅನಿಲ್ ದಾಸ್ ಹಾಗೂ ಅವರ ಪತ್ನಿ ಆಶಾಲತಾ ಜೊತೆಗಿದ್ದು, ಪ್ರಶಸ್ತಿ ಸ್ವೀಕರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಸಂಸದೀಯ ವ್ಯವಹಾರ, ಶಾಸನ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಚಿತ್ರನಟ ಅನಿರುದ್ಧ ಜಟ್ಕರ್, ಕನ್ನಡಪ್ರಭ ಏಷಿಯಾನೆಟ್ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಮತ್ತಿತರರು ಇದ್ದರು.
ಉತ್ತರ ಕನ್ನಡದ ಅನೇಕರಿಗೆ ನರ್ಸಿಗ್ ತರಬೇತಿ ಹಾಗೂ ಅದೇ ಕ್ಷೇತ್ರದಲ್ಲಿ ಉದ್ಯೋಗ ನೀಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸಿಕ್ಕಿದ್ದರಿಂದ ಸಂತೋಷವಾಗಿದೆ. ಜೊತೆಗೆ ತಮ್ಮ ಜವಾಬ್ದಾರಿಯ ಹೆಚ್ಚಿದೆ ಎಂದು ಅನಿಲದಾಸ್ ಅವರು ಅನಿಸಿಕೆ ವ್ಯಕ್ತಪಡಿಸಿದರು.





