ಸಮಾಜದ ಒಲಿತಿಗಾಗಿ ಪ್ರಾರ್ಥಿಸೋಣ: ಶ್ರೀ ವಿಖ್ಯಾತನಂದ ಸ್ವಾಮೀಜಿ
ನಾರಾವಿ: ನಾಡಿನ ಆರಾಧ್ಯ ಮೂರ್ತಿಗೆ ಬ್ರಹ್ಮಕಲಶ ನೆರವೇರಿಸುವುದು ಅತ್ಯಂತ ಪುಣ್ಯದ ಕೆಲಸ. ಜೀವನದಲ್ಲಿ ಎಲ್ಲರ ಒಲಿತಿಗಾಗಿ ಪ್ರಾರ್ಥಿಸೋಣ, ವಿಶೇಷವಾಗಿ ಮಕ್ಕಳ ಪ್ರತಿಭೆ ಮತ್ತು ಶಿಕ್ಷಣಕ್ಕೆ ಆಧ್ಯತೆ ನೀಡುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ ಎಂದು ಬೆಂಗಳೂರಿನ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ನುಡಿದರು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿಯವರ ಅಮೃತ ಹಸ್ತದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿ, ನಾವು ಯಾರಿಗೂ ಕೆಟ್ಟದನ್ನು ಬಯಸಬಾರದು. ಅತಿಯಾದ ಕೋಪ ಬುದ್ದಿನಾಶಕ್ಕೆ ಕಾರಣವಾಗುತ್ತದೆ. ಬುದ್ದಿನಾಶದಿಂದ ಮನುಷ್ಯ ನಾಶವಾಗುತ್ತಾನೆ ಎಂದು ಎಚ್ಚರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ., ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ., ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ದಾನಿ ವೀರಮ್ಮ ಸಂಜೀವ ಸಾಲ್ಯಾನ್ ಡೊಂಕುಬೆಟ್ಟು, ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ನಾರಾವಿ ಹೆಗ್ಗಡೆ ಸಮಾಜದ ಅಧ್ಯಕ್ಷ ಸದಾನಂದ ಹೆಗ್ಡೆ, ಸತೀಶ್ ಚಿಗುರು, ಕಾರ್ಕಳದ ಉದ್ಯಮಿ ರಾಕೇಶ್ ಅಮೀನ್, ನಾರಾವಿ ಪ್ರಾ,ಕ್ರ.ಪ.ಸ. ಸಂಘದ ನಿರ್ದೇಶಕ ವಿಠಲ ಪೂಜಾರಿ ಸಾವ್ಯ, ಉಜಿರೆಯ ಉದ್ಯಮಿ ಸುರೇಶ್ ಪೂಜಾರಿ, ಪೂವಪ್ಪ ಪೂಜಾರಿ ಹಾರೋಲ್ದಡ್ಡ, ಶೀನ ಪೂಜಾರಿ ನಾರಾವಿ, ಪುದುವೆಟ್ಟು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ, ತೋಟತ್ತಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ, ಕಕ್ಕಿಂಜೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಪ್ರಸಾದ್ ಗೌಡ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಅರ್ಚಕ ವೇ.ಮೂ. ಕೃಷ್ಣತಂತ್ರಿ, ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಮಹಾವೀರ ಜೈನ್, ಎನ್. ಶ್ರೀನಿವಾಸ ವಾಸುದೇವ ಕಿಣಿ, ಜಗದೀಶ್ ಅಂಚನ್, ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ ಹಂಬಡ, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಜಗದೀಶ್ ಹೆಗ್ಡೆ, ಎನ್. ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಶ್ರೀಮತಿ ಯಶೋಧ, ಶ್ರೀಮತಿ ರಶ್ಮಿ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಸ್ವಾಗತಿಸಿದರು.
ಬೆಳಿಗ್ಗೆ ವೈದಿಕ ಕಾರ್ಯಕ್ರಮದಲ್ಲಿ ಅಷ್ಟಬಂಧ ಪ್ರತಿಷ್ಠೆ, ಮಹಾಪೂಜೆ ನಡೆಯಿತು. ಸಂಜೆ ದೊಡ್ಡರಂಗ ಪೂಜೆ ಉತ್ಸವ ನಡೆಯಿತು. ಬೆಳಿಗ್ಗೆ ವಿವಿಧ ತಂಡಗಳಿಂದ ಭಜನೆ ಹಾಗೂ ಸಂಜೆ ಮೈಸೂರು ರಾಮಚಂದ್ರ ರಾವ್ ಅವರಿಂದ ನಡೆದ ದಾಸರ ಹಾಡುಗಳು ಎಲ್ಲರ ಮನಸೆಳೆಯಿತು.
ಬ್ರಹ್ಮಕಲಶಕ್ಕೆ ಅದ್ದೂರಿ ಚಾಲನೆ: ರಕ್ಷಿತ್ ಶಿವರಾಮ್
ಎಲ್ಲರ ಸಹಕಾರದಿಂದ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ತಾಲೂಕಿನ ದೇವಸ್ಥಾನಗಳು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಪಾರ ಪ್ರಮಾಣದ ಹಸಿರುವಾಣಿ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆಯಾಗಿದ್ದು, 1000ಕ್ಕೂ ಮಿಕ್ಕಿ ಭಜಕರಿಂದ ನಡೆದ ಸೂರ್ಯವಂದನ ಭಜನೋತ್ಸವದಿಂದ ಬ್ರಹ್ಮಕಲಶಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಅಪರೂಪದ ಕ್ಷೇತ್ರದ ಬ್ರಹ್ಮಕಲಶೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಎಲ್ಲರಿಗೂ ಪುಣ್ಯ ಪ್ರಾಪ್ತಿಯಾಗಲಿದೆ.
ರಕ್ಷಿತ್ ಶಿವರಾಮ್, ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ





