ಯುವವಾಹಿನಿ ಸಕಾರಾತ್ಮಕ ಬದಲಾವಣೆಯ ಪ್ರೇರಕ ಶಕ್ತಿ: ಜಗದೀಶ್ಚಂದ್ರ ಡಿ.ಕೆ.
ವೇಣೂರು: ಸಂಸ್ಥೆ ಎಂಬುದು ಕೇವಲ ಸಂಘಟನೆಯಷ್ಟೇ ಅಲ್ಲ, ಅದು ಸಮಾಜವನ್ನು ರೂಪಿಸುವ ಶಕ್ತಿ ಕೇಂದ್ರವಾಗಿರುತ್ತದೆ. ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಲ್ಲೂ ನಾಯಕತ್ವದ ಗುಣ ಅಡಗಿದೆ. ಸೇವೆ, ಶಿಸ್ತು ಮತ್ತು ಸಮರ್ಪಣೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವವಾಹಿನಿ ಶಕ್ತಿಯಾಗಿ ಹೊರಹೊಮ್ಮಿದೆ. ಒಟ್ಟಾಗಿ ಚಿಂತಿಸಿ, ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಗುರಿ ಸಾಕಾರವಾಗುತ್ತದೆ. ಇಂದಿನ ನಿಮ್ಮ ಸೇವೆಯೇ ನಾಳೆಯ ಶ್ರೇಷ್ಠ ಸಮಾಜದ ಅಡಿಗಲ್ಲು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ. ಹೇಳಿದರು.
ಯುವವಾಹಿನಿ ವೇಣೂರು ಘಟಕದ ಆಶ್ರಯದಲ್ಲಿ ದಿನಾಂಕ 19.01.2025ರಂದು ವೇಣೂರು ಲಯನ್ಸ್ ಕ್ಲಬ್ನಲ್ಲಿ ನಡೆದ ಅರಿವು -2026 ಮಾರ್ಗದರ್ಶಿ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರ ನಡೆಸಿಕೊಟ್ಟರು. ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು
ಯುವವಾಹಿನಿ ವೇಣೂರು ಘಟಕದ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಗಾರದ ಪ್ರಯೋಜನ ಪಡೆದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ಮೂಡುಬಿದ್ರಿ, ಶುಭಕರ ಪೂಜಾರಿ ಸಾವ್ಯ, ಸಮಾಜ ಸೇವಾ ನಿರ್ದೇಶಕ ನಿತೀಶ್ ಹೆಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು
ಯುವವಾಹಿನಿ ವೇಣೂರು ಘಟಕದ ಕಾರ್ಯದರ್ಶಿ ದಕ್ಷ ಅಂಬಲ ಅಂಡಿ0ಜೆ ಧನ್ಯವಾದ ನೀಡಿದರು. ಸಲಹೆಗರಾದ ಅರುಣ್ ಕೋಟ್ಯಾನ್ ನಿರೂಪಿಸಿದರು.






