ಅಳದಂಗಡಿ: ಮಂಗಳೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ಕವಿತಾ ಎನ್. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ.(ಡಾಕ್ಟರೇಟ್) ಪದವಿ ನೀಡಿದೆ. ‘Study on vertex partitions of graphs in the theory of domination’ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್.ಡಿ.(ಡಾಕ್ಟರೇಟ್) ಪದವಿ ಲಭಿಸಿದೆ.
ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರು ಹೆಗಡೆ ಮಾರ್ಗದರ್ಶನ ನೀಡಿದರು. ಕೆದ್ದು, ಕೆ ಎಸ್ ಎನರ್ಜಿ ಸ್ಟೇಷನ್ ಮಾಲಕ, ಬಡಗಕಾರಂದೂರು ಗ್ರಾಮದ ಹಾನಿಂಜ ನಿವಾಸಿ ಸುಕೇಶ್ ಪೂಜಾರಿಯವರ ಧರ್ಮಪತ್ನಿ ಹಾಗೂ ಮೊಗರ್ನಾಡು ನಾರಾಯಣ ನಾಯ್ಕ ಮತ್ತು ಸುಮತಿ ದಂಪತಿ ಪುತ್ರಿ.





