ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ರಾಜ್ಯ ಹೆದ್ದಾರಿಯ ಪೆರಿಂಜೆಯಲ್ಲಿ ಇದೇ ನ. 28ರಂದು ಎಚ್.ಪಿ. ಪೆಟ್ರೋಲ್ ಬಂಕ್ ಉದ್ಘಾಟನೆಗೊಳ್ಳಲಿದೆ.
ಪೆರಿಂಜೆಯ ದೇವಕಿ ಬಿಸ್ನೆಸ್ ಕಾಂಪ್ಲೆಕ್ಸ್ನಲ್ಲಿ ನೂತನ ಪೆಟ್ರೋಲ್ ಪಂಪ್ ಶುಭಾರಂಭಗೊಳ್ಳಲಿದೆ.
ಅಂದೇ ದಿನ ಸಂಜೆ 6-30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಸ್ಥೆಯ ಮಾಲಕರಾದ ರೇವತಿ ಎಂಟರ್ ಪ್ರೈಸಸ್ನ ಶ್ರೀಮತಿ ದೇವಿಕಾ ವಿ. ಶೆಟ್ಟಿ, ವಿಶ್ವನಾಥ ಎಸ್. ಶೆಟ್ಟಿ ಮತ್ತು ಶ್ರೀಮತಿ ರೇವತಿ ವಿಶ್ವನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





