ವೇಣೂರು: ವೇಣೂರು ವಲಯ ಬಂಟರ ಸಂಘ (ರಿ.) ವತಿಯಿಂದ ವೇಣೂರು ವಲಯ ಬಂಟರ ಸಮ್ಮಿಲನ ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 13ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.00ಕ್ಕೆ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಅಮೃತ ಭವನ’ದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘ (ರಿ.) ಅಧ್ಯಕ್ಷ ಪಿ.ಎಚ್. ಪ್ರಕಾಶ್ ಶೆಟ್ಟಿ ನೊಚ್ಚ ಅವರು ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ಬೇಲಾಡಿ ವಿಠ್ಠಲ್ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುನಿಯಾಲು ಉದಯಕುಮಾರ್ ಚಾರಿಟೇಬಲ್ ಟ್ರಸ್ಟ್ (ರಿ.) ಮುನಿಯಾಲು ಇದರ ಮುನಿಯಾಲು ಉದಯಕುಮಾರ್ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಆನಂದ ಟ್ರೇಡ್ಸ್ ಮಂಗಳೂರಿನ ಆನಂದ ಶೆಟ್ಟಿ, ಕಂಬಳ ಕೋಣಗಳ ಯಜಮಾನ ಸುರೇಶ್ ಶೆಟ್ಟಿ ‘ಸೂರ್ಯಶ್ರೀ’ ಹೊಸಾರು, ವಕೀಲ ಡಿ. ನಾಗೇಶ್ ಶೆಟ್ಟಿ ಮೂಡುಬಿದಿರೆ, ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಲಯನ್ಸ್ ಕ್ಲಬ್ ಸುಲ್ಲೇರಿಯ ಸ್ಥಾಪಕಾಧ್ಯಕ್ಷ ಸುಂದರ ಶೆಟ್ಟಿ ಸುಲ್ಲೇರಿ ಸೇರಿದಂತೆ ಬಂಟರ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸೀತಾರಾಮ ರೈ ‘ಅನುಗ್ರಹ ನಿವಾಸ’ ಪೆರಿಂಜೆ (ಸಹಕಾರಿ ಕ್ಷೇತ್ರ), ದಾಸಪ್ಪ ರೈ ಬ್ರಾಣೇಗೇರಿ, ಬಜಿರೆ (ಯಕ್ಷಗಾನ ಕ್ಷೇತ್ರ), ಕುಟ್ಟಿ ಶೆಟ್ಟಿ ಹಕ್ಕೇರಿ, ಹೊಕ್ಕಾಡಿಗೋಳಿ (ಕಂಬಳ ಕ್ಷೇತ್ರ) ಹಾಗೂ ಶ್ರೀಮತಿ ಸುಮತಿ ಸದಾನಂದ ಶೆಟ್ಟಿ, ಖಂಡಿಗ (ಆರೋಗ್ಯ ಕ್ಷೇತ್ರ) ಇವರನ್ನು ಸನ್ಮಾನಿಸಲಾಗುವುದು.
ಬೆಳಿಗ್ಗೆ 8.00ಕ್ಕೆ ಉಪಾಹಾರ, ಬೆಳಿಗ್ಗೆ 9.00ಕ್ಕೆ ಉದ್ಘಾಟನಾ ಕಾರ್ಯಕ್ರಮ, ಬೆಳಿಗ್ಗೆ 10.00ಕ್ಕೆ ಉಪನ್ಯಾಸ ಹಾಗೂ ಮಧ್ಯಾಹ್ನ 1.00ಕ್ಕೆ ಸಹಭೋಜನ ನಡೆಯಲಿದೆ.
ವೇಣೂರು ವಲಯ ಬಂಟರ ಸಂಘ (ರಿ.) ಅಧ್ಯಕ್ಷ ಶ್ರೀ ಪಿ. ದೇಜಪ್ಪ ಶೆಟ್ಟಿ ಪಿಜತ್ತೋಡಿ, ಉಪಾಧ್ಯಕ್ಷರುಗಳಾದ ಅರವಿಂದ ಶೆಟ್ಟಿ ‘ಜಯಶ್ರೀ’ ಖಂಡಿಗ, ಲೋಹಿತ್ ರೈ ಹೊಸಂಗಡಿ, ಶಿವರಾಮ ಶೆಟ್ಟಿ ಬುಳಿಕ್ಯಾರ ಕುಕ್ಕೇಡಿ, ಕಾರ್ಯದರ್ಶಿ ಶ್ರೀ ಸಂದೀಪ್ ಕುಮಾರ್ ಕುಂಡಾಜೆ ಹೊಕ್ಕಾಡಿಗೋಳಿ, ಕೋಶಾಧಿಕಾರಿ ವಿಶಾಲ್ ರೈ ಹೊಸಂಗಡಿ ಹಾಗೂ ಸರ್ವ ಸದಸ್ಯರು ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9480346793, 9980963764 ಸಂಪರ್ಕಿಸಬಹುದಾಗಿದೆ.




