ವೇಣೂರು: ದಸರಾ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಕುಕ್ಕೇಡಿ-ನಿಟ್ಟಡೆ ವತಿಯಿಂದ ನ. ೮ರಂದು ಕುಕ್ಕೇಡಿಯಲ್ಲಿ ಕೆಸರ್ದಗೊಬ್ಬು ಕ್ರೀಡಾಕೂಟ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯಲಿರುವ ದೋಸೆಹಬ್ಬ ಕಾರ್ಯಕ್ರಮದ ಅಂತಿಮ ಪೂರ್ವಭಾವಿ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದ ವಠಾರದಲ್ಲಿ ನಡೆಯಿತು.
ಶೇಖರ ಕುಕ್ಕೇಡಿ ಹಾಗೂ ನಿತೀಶ್ ಎಚ್. ಕೋಟ್ಯಾನ್ ಹಾಗೂ ಮತ್ತಿತರ ಪ್ರಮುಖರು ಕಾರ್ಯಕ್ರಮದ ಯಶಸ್ವಿಗೆ ಹಲವು ಸಲಹೆಗಳನ್ನು ನೀಡಿದರು. ಸಮಿತಿ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಅಧ್ಯಕ್ಷರಾದ ಸತೀಶ್ ಅಂಚನ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



