ಕೋಲಾರ, ಅ.19: ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯ ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಘೋಷಣೆ ಮಾಡಿದ್ದ ಡಾಕ್ಟರೇಟ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದರು. ಆದ್ರೆ, ಇದೀಗ ಅನಿವಾರ್ಯವಾಗಿ ಎಲ್ಲರ ಒತ್ತಾಯದ ಮೇರೆಗೆ ಇಂದು (ಅಕ್ಟೋಬರ್ 19) ನಡೆದ R.L.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ದೇವರಾಜ ಅರಸು ಮೆಡಿಕಲ್ ಕಾಲೇಜಿನಿಂದ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ.


ಒಂದು ವರ್ಷದ ಹಿಂದೆಯೇ ಕಾಲೇಜು ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತಾದರೂ ಸಿದ್ದರಾಮಯ್ಯ ನಿರಾಕರಿಸಿದ್ದರು. ಆದ್ರೆ, ಇಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರ ಹೆಸರು ಘೋಷಣೆ ಮಾಡಲಾಯ್ತು. ಈ ವೇಳೆ ಸಿದ್ದರಾಂಯ್ಯ ಆಶ್ಚರ್ಯಗೊಂಡರು. ಕೊನೆಗೆ ಗಣ್ಯರ ಒತ್ತಾಯದ ಮೇರೆಗೆ ಸಿದ್ದರಾಮಯ್ಯನವರು ಡಾಕ್ಟರೇಟ್ ಸ್ವೀಕರಿಸಿದರು.

‘ಡಾ. ಸಿದ್ದರಾಮಯ್ಯ ಅಂತಾ ಕರೆಯಬೇಡಿ’
ನಾನು ಡಾಕ್ಟರೇಟ್ ಬೇಡ ಅಂತ ಹೇಳಿದ್ದೆ.ಸ್ವೀಕಾರ ಮಾಡೋದಾ ಬೇಡ್ವಾ ಅಂತ ಇದ್ದೆ. ಆದ್ರೂ ನನಗೆ RL ಜಾಲಪ್ಪ ಕಾಲೇಜಿನವರು ಗೌರವ ಡಾಕ್ಟರೇಟ್ ನೀಡಿದ್ದಾರೆ. RL ಜಾಲಪ್ಪ ಕಾಲೇಜಿನವರಿಗೆ ಧನ್ಯವಾದಗಳು. ಆದ್ರೆ ನನಗೆ ಸಿದ್ದರಾಮಯ್ಯ ಅಂತಾನೆ ಕರೆಯಿರಿ. ಡಾ.ಸಿದ್ದರಾಮಯ್ಯ ಅಂತಾ ಕರಿಬೇಡಿ ಎಂದು ನಗೆ ಚಟಾಕಿ ಹಾರಿಸಿದರು.
