ವೇಣೂರು: ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಮರದ ಪಲ್ಲಕ್ಕಿ ಹಾಗೂ ಚಂದ್ರಮಂಡಲ ರಥ ನಿರ್ಮಾಣದ ಬಗ್ಗೆ ವಿಜ್ಞಾಪನ ಪತ್ರವನ್ನು ಕ್ಷೇತ್ರದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನವನ್ನು ರೂ. 1.20 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಳಿಸಿ 2012ರಲ್ಲಿ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿತ್ತು. ಆ ಬಳಿಕ 2024ರಲ್ಲಿ ಎರಡನೇ ಬಾರಿಗೆ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಕಳೆದ 14 ವರ್ಷಗಳಲ್ಲಿ 3 ಕೋಟಿಗೂ ಅಧಿಕ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ವಿಜ್ಞಾಪನ ಪತ್ರ ಬಿಡುಗಡೆ ವೇಳೆ ಆಡಳಿತ ಮೊಕ್ತೇಸರರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಪ್ರಧಾನ ಅರ್ಚಕರಾ ಸುಬ್ರಹ್ಮಣ್ಯ ಪ್ರಸಾದ್, ಮೊಕ್ತೇಸರರು ಹಾಗೂ ಭಕ್ತಾಧಿ ಗ್ರಾಮಸ್ಥರು ಉಪಸ್ಥಿತರಿದ್ದರು.




