ವೇಣೂರು: ಜನಸೇವಾ ಸೌಹಾರ್ದ ಸಹಕಾರಿ ನಿ. ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 19ರಂದು ಸಂಘದ ಅಧ್ಯಕ್ಷರಾದ ನಾಗೇಶ್ ಡಿ. ಅವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಶ್ರೀ ಗುರುದೇವ ಸಹಕಾರಿ ಸಂಘದ ಮೆನೇಜರ್ ಆಗಿರುವ ಉಮೇಶ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಉಪಾಧ್ಯಕ್ಷರಾದ ಶಶಿಧರ ಶೆಟ್ಟಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರಶ್ಮಿ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಿಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.



ಸಂಘವು ಈಗಾಗಲೇ 10 ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ. ಹೊಸ್ಮಾರಿನಲ್ಲಿ ನಮ್ಮ ಸಂಘವು ಶಾಖೆಯನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕಾರ್ಯವ್ಯಾಪ್ತಿ ಒಳಪಡುವಲ್ಲಿ ಶಾಖೆಗಳನ್ನು ತೆರೆಯಲು ಚಿಂತನೆ ನಡೆಸಿದ್ದೇವೆ. ವರದಿ ಸಾಲಿನಲ್ಲಿ ಸಂಘವು 11,03,21.442.47 ರೂ. ವಹಿವಾಟು ನಡೆಸಿದ್ದು, 1,80,70,761 ರೂ. ಠೇವಣಿ ಸಂಗ್ರಹಿರುತ್ತದೆ. ರೂ.1,50,16,004 ಮೊತ್ತ ಸದಸ್ಯರಿಗೆ ಸಾಲ ನೀಡಿದ್ದು, ಪ್ರಸ್ತುತ ಸಾಲಿನಲ್ಲಿ ರೂ. 40,9,465.10 ಲಾಭ ಗಳಿಸಿರುತ್ತದೆ ಎಂದರು.
ಸಭೆಯಲ್ಲಿ ನಿರ್ದೇಶಕರಾದ ಶೇಖರ ಶೆಟ್ಟಿ, ಸದಾನಂದ ಶೆಟ್ಟಿ, ಸುಂದರ ಬಿ. ಹೆಗ್ಡೆ, ಶೇಖರ, ಸುನಂದ, ವಾಣಿ ಕೆ. ಹಾಗೂ ಸಂಘದ ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು. ಶ್ರೀಮತಿ ರೂಪಿಕಾ, ಕು. ಸುರಕ್ಷಾ ಮತ್ತು ಶ್ರೀಮತಿ ಪ್ರತಿಭಾ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರು ಸ್ವಾಗತಿಸಿ, ನಿರ್ದೇಶಕರಾದ ಸದಾನಂದ ಶೆಟ್ಟಿ ವಂದಿಸಿದರು.



