ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ, ವೇಣೂರು ವಲಯದ ಗುಂಡೂರಿ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸಾಮಾನ್ಯ ಕಾನೂನು ಅರಿವು ಕಾರ್ಯಕ್ರಮವು ಇಲ್ಲಿಯ ಶ್ರೀ ಸತ್ಯನಾರಾಯಣ ಭಜನ ಮಂದಿರದ ಸಭಾಂಗಣದಲ್ಲಿ ನಡೆಯಿತು.



ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಕೇಶವತಿ ಅವರು ನಿತ್ಯ ಜೀವನದಲ್ಲಿನ ಸಾಮಾನ್ಯ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕಾನೂನಿನಲ್ಲಿ ಮಹಿಳೆಯರಿಗೆ ರಕ್ಷಣೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗುಲಾಬಿ ವಹಿಸಿದ್ದರು. ಗುರುವಾಯನಕೆರೆ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ರವಿಕಲಾ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಕುಶಾಲಾಕ್ಷಿ ಸೇರಿದಂತೆ ಕೇಂದ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



