ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ರೂ.20 ಲಕ್ಷ ವೆಚ್ಚದಲ್ಲಿ ಅನ್ನಛತ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ವೇಣೂರು ದೇವಸ್ಥಾನವು ಶಿಲಾಮಯವಾಗಿ ಜೀರ್ಣೋದ್ಧಾರಗೊಂಡು 2023ರಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿತ್ತು. ಆದರೆ ಅಗತ್ಯವಾಗಿ ಆಗಬೇಕಿದ್ದ ಭೋಜನಶಾಲೆಯ ನಿರ್ಮಾಣ ಆಗಿರಲಿಲ್ಲ. ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡು ಮೂರು ವರ್ಷಗಳು ಕಳೆದರೂ, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅತ್ಯಂತ ಅಗತ್ಯವಾಗಿದ್ದ ಅನ್ನಛತ್ರದ ಕೊರತೆ ಎದ್ದು ಕಾಣುತ್ತಿತ್ತು.



ಅನ್ನಛತ್ರದ ನಿರ್ಮಾಣ ಕಾರ್ಯಕ್ಕೆ ಅಂದಾಜುಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲಾಗಿದ್ದು, ಕೆಲಸಕಾರ್ಯಗಳು ಭಾಗಶಃ ಪೂರ್ಣಗೊಂಡಿದೆ.
ಇದರಲ್ಲಿ ಅಡುಗೆಕೋಣೆ, ಅತಿಥಿಗಳಿಗೆ ಊಟದ ಕೊಠಡಿ, ಸುಮಾರು 2800 ಚದರ ಅಡಿಯಷ್ಟು ಜಾಗದಲ್ಲಿ ಭಕ್ತರಿಗೆ ಊಟೋಪಚಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನೆಲಕ್ಕೆ ಟೈಲ್ಸ್, ಮಹಡಿಗೆ ಶೀಟ್ ಅಳವಡಿಸಲಾಗಿದೆ.

ದೇಣಿಗೆಗೆ ಮನವಿ
ಈ ಅನ್ನಛತ್ರದ ನಿರ್ಮಾಣಕ್ಕೆ ದಾನಿಗಳ ಸಹಕಾರವನ್ನು ಆಡಳಿತ ಮಂಡಳಿ ಯಾಚಿಸಿದೆ. ಭಕ್ತರು ಹಾಗೂ ದಾನಿಗಳು ಆರ್ಥಿಕ ಸಹಕಾರ ನೀಡಿ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವಂತೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ ಶೆಟ್ಟಿ ವಿನಂತಿಸಿದ್ದಾರೆ. ಸೆ. 17ರ ಕನ್ಯಾ ಸಂಕ್ರಮಣದಂದು ನೂತನ ಅನ್ನಛತ್ರದ ಉದ್ಘಾಟನೆ ನಡೆಯಲಿದೆ.



