ವೇಣೂರು: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಗಸ್ಟ್ ತಿಂಗಳ ಮಾಸಿಕ ಸಭೆಗೆ ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ಇದರ ಉಪಾಧ್ಯಕ್ಷರಾದ ಗಿರೀಶ್ ಪೂಜಾರಿ ನ್ಯೂ ಹಲೆಕ್ಕಿ ಮೂಡುಕೋಡಿ ಇವರು ಆಗಮಿಸಿ ಅವರನ್ನು ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಸಂಘದ ಪರವಾಗಿ ಶಾಲು ಹಾಕಿ ಗೌರವಿಸಿದರು. ಶ್ರೀಯುತರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಸಂಘಕ್ಕೆ ತನ್ನ ಸ್ವಂತ ಖರ್ಚಲ್ಲಿ ಒಂದು ಬೋರ್ವೆಲ್ ಅನ್ನು ನೀಡುವ ಭರವಸೆ ನೀಡಿ ಸಂಘದ ಸಭಾ ಭವನದ ಕಾರ್ಯಯೋಜನೆಗೆ ಮಾರ್ಗದರ್ಶನ ನೀಡಿದರು.


ಸಭೆಯಲ್ಲಿ ತಾಲ್ಲೂಕು ಬಿಲ್ಲವ ಸಂಘದ ನಿರ್ದೇಶಕರಾದ ವಿಶ್ವನಾಥ್ ದಡ್ಡಲಪಲ್ಕೆ, ಗಿರೀಶ್ ಕೆ.ಎಸ್, ಚಂದ್ರಶೇಖರ್ ಬಜಿರೆ, ಪ್ರಶಾಂತ್ ಗುತ್ತು, ದಿನೇಶ್ ತಾರಿಪಡ್ಪು, ನವೀನ್ ಪಚ್ಚೇರಿ,ರಾಜೇಶ್ ಕೈತೇರಿ,ಸಂಜೀವ ಮೂಡ್ಲ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಸತೀಶ್ ಉಜಿರ್ದಡ್ದ ವಂದಿಸಿದರು.



