ನಾರಾವಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಗುರುವಾಯನಕೆರೆ, ನಾರಾವಿ ವಲಯ ಕೊಕ್ರಾಡಿ/ಸಾವ್ಯ ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಕ್ರಾಡಿ ಹಾಗೂ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಶ್ರದ್ಧಾ ಕೇಂದ್ರ ಶುಚಿತ್ವ ಕಾರ್ಯಕ್ರಮದಡಿ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣ ಮತ್ತು ಪೂಜಾ ಸಲಕರಣೆಗಳ ಸ್ವಚ್ಚತಾ ಕರಸೇವೆ ಯಲ್ಲಿ 55 ಮಂದಿ ಭಕ್ತಾಧಿಗಳು ಭಾಗವಹಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಾರಿಜಾ, ಆಡಳಿತ ಮೊಕ್ತೇಸರಾದ ಶೀತಲ್ ಮತ್ತು ಅಖಿಲ್ ಕುಮಾರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್, ರಾಜು ಶೆಟ್ಟಿ ತಾಲೂಕು ಜನ ಜಾಗೃತಿ ಸಮಿತಿ ಸದಸ್ಯರು, ಪೂಜಾ ಸಮಿತಿ ಅಧ್ಯಕ್ಷರಾದ ಆನಂದ ಶೆಟ್ಟಿ,ಸೇವಾ ಪ್ರತಿನಿಧಿ ಶಶಿಧರ ಕೆ ಕುಲಾಲ್, ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷ ರುಗಳು, ಪದಾಧಿಕಾರಿಗಳು, ಸದಸ್ಯರು ಮತ್ತು ಸ್ವಸಹಾಯ ಸಂಘಗಳ ಸದಸ್ಯೆಯರು ಉಪಸ್ಥಿತರಿದ್ದರು.



