ಹೊಸಂಗಡಿ: ಗ್ರಾಮದ ನೂರುಲ್ ಹುದಾ ಜುಮ್ಮಾ ಮಸೀದಿ ಪಡ್ದಂದಡ್ಕ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.


ದೇಶದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷರಾದ ಜನಾಬ್ ಪುತ್ತು ಮೋನು ಗಾಂಧಿ ನಗರ ರವರು ನೆರವೇರಿಸಿದರು.
ಜಮಾಅತಿನ ಹಿರಿಯರು ಯುವಕರು, ಮದರಸ ವಿದ್ಯಾರ್ಥಿಗಳು, ಆಡಳಿತ ಕಮಿಟಿಯ ಸದಸ್ಯರು ಪರಿಸರದ ನೂರಾರು ಜನರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಮಸೀದಿಯ ಖತೀಬರಾದ ಸಮೀರ್ ದಾರಿಮಿ ಮಾಡಾವು ಇವರು ದುಆ ನೆರವೇರಿಸಿದರು.



