ಬೆಳ್ಮಣ್: ದಾನಿಗಳ ನೆರವಿನಿಂದ ಇನ್ನಾ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಲೇಖನ ಸಾಮಾಗ್ರಿ, ಬ್ಯಾಗ್, ಕೊಡೆ, ಸಮವಸ್ತ್ರ ವಿತರಿಸುವ ಕಾರ್ಯಕ್ರಮವು ಆ. 14ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಇನ್ನಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ, ಬ್ರೈಟ್ ಫ್ಲೆಕ್ಸ್ ಇಂಟರ್ನ್ಯಾಷನಲ್ ಕಂಪನಿಯ ಪ್ರಬಂಧಕರಾದ ಪ್ರಕಾಶ್, ಇನ್ನದ ಗುತ್ತು ಹಾರ್ದಿಕ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಅಶ್ವಿನಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಉಷಾ, ಸಹಾಯಕಿ ಸುಜಾತ ಹಾಗೂ ಪೋಷಕರು ಉಪಸ್ಥಿತರಿದ್ದರು.
ಬ್ರೈಟ್ ಫ್ಲೆಕ್ಸ್ ಇಂಟರ್ನ್ಯಾಷನಲ್ ಕಂಪನಿ ವತಿಯಿಂದ ಮಕ್ಕಳಿಗೆ ಲೇಖನ ಸಾಮಗ್ರಿ , ಬ್ಯಾಗ್, ಕೊಡೆ ಹಾಗೂ ಪ್ರದೀಪ್ ಶೆಟ್ಟಿ ಇವರು ೨೨ ವರ್ಷಗಳಿಂದ ಪುಟಾಣಿ ಮಕ್ಕಳಿಗೆ ಸಮವಸ್ತ್ರ ನೀಡಿರುತ್ತಾರೆ. ಕೊಡುಗೆ ನೀಡಿದ ದಾನಿಗಳಿಗೆ ಅಂಗನವಾಡಿ ಕಾರ್ಯಕರ್ತೆ ಕೃತಜ್ಞತೆ ಸಲ್ಲಿಸಿದರು.



