ವೇಣೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವೇಣೂರು ಪ್ರಖಂಡದ ವತಿಯಿಂದ ಪಂಜಿನಮೆರವಣಿಗೆ ಮತ್ತು ಅಖಂಡ ಭಾರತ ಸಂಕಲ್ಪ ದಿನಾಚರಣೆ ಆ. 14ರಂದು ರಾತ್ರಿ 8-00 ಗಂಟೆಯಿಂದ ವೇಣೂರು ಶ್ರೀ ಭರತೇಶ ಸಭಾಂಗಣದಲ್ಲಿ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಕುಮಾರ್ ಮಂಜಿಲ ವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಅ.ಭಾ.ವಿ.ಪ.ನ ಸುವಿತ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಅಂದು ಸಂಜೆ 6-30ರಿಂದ ಶ್ರೀ ರಾಮ ಭಜನ ಮಂದಿರದಿಂದ ಪಂಜಿನಮೆರವಣಿಗೆ ಹೊರಟು ಭರತೇಶ ಸಭಾಭವನದವರೆಗೆ ನಡೆಯಲಿದೆ.



