ಹೊಸಂಗಡಿ: ಸಾಧನಾಶ್ರೀ ಮಹಿಳಾ ಮಂಡಲದ ಭಗಿನಿಯರು ಆಟಿಡೊಂಜಿ ದಿನತ ಗಮ್ಮತ್ತು ಕಾರ್ಯಕ್ರಮ ದಲ್ಲಿ ಆಟಿ ತಿಂಗಳಲ್ಲಿ ಮಾಡುವ ವಿವಿಧ ಖಾದ್ಯಗಳನ್ನು ತಯಾರಿಸಿ ತಂದು ಅದರ ಮಹತ್ವ ವನ್ನು ತಿಳಿಸಿದರು.
ಬಳಿಕ ಆ.8ರಂದು ಮಹಿಳಾ ಮಂಡಲದ ವತಿಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಮಹಿಳಾ ಮಂಡಲದ ಎಲ್ಲಾ ಮಹಿಳಾ ಸದಸ್ಯರು, ಮಂಜುನಾಥೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





