Karnataka Cabinet Expansion: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಯ ಮಹೂರ್ತದ ವೇಳೆಗೆ ಮತ್ತೊಂದು ಹೈಡ್ರಾಮಾ ನಡೆದಿದ್ದು, ಹೈಕಮಾಂಡ್ ಪ್ರಕಟಿಸಿದ್ದ 20 ಸಚಿವರ ಪಟ್ಟಿಯಲ್ಲಿದ್ದ ಏಕೈಕ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಕೊನೆ ಕ್ಷಣದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವ ಅವಕಾಶ ಕೈತಪ್ಪಿದೆ. ಇದರಿಂದಾಗಿ ಇಂದು ನಡೆದ ಸಮಾರಂಭದಲ್ಲಿ 20ರ ಬದಲಿಗೆ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.




