ಇಂದಿನ ಬಿಜಿ ಲೈಫ್ನಲ್ಲಿ ಹಗಲು ಹೊತ್ತು ಯಾರಿಗೂ ಟೈಮ್ ಸಿಗುವುದಿಲ್ಲ. ಹೀಗಾಗಿ ಬಹುತೇಕರು ರಾತ್ರಿ ಹೊತ್ತು ಮನೆಗೆಲಸ ಮಾಡಿಕೊಳ್ಳುತ್ತಾರೆ. ಈಗಂತೂ ಎಲ್ಲರ ಮನೆಯಲ್ಲೂ Home ವಾಷಿಂಗ್ ಮೆಷಿನ್ ಇರುತ್ತೆ. ಹಾಗಾಗಿ ರಾತ್ರಿ ಬಟ್ಟೆ ತೊಳೆದು ಒಣಗಾಕುವುದು ಕಾಮನ್ ಆಗಿದೆ.

ಆದರೆ ರಾತ್ರಿ ಬಟ್ಟೆ ತೊಳೆಯುವುದು ಹಾಗೂ ಒಣಗಾಕುವುದನ್ನು ನಮ್ಮ ಹಿರಿಯರು ಬೇಡ ಎನ್ನುತ್ತಿದ್ದರು. ವಾಸ್ತು, ಜ್ಯೋತಿಷ್ಯ ಹಾಗೂ ವಿಜ್ಞಾನದ ಪ್ರಕಾರವೂ ಇದು ತಪ್ಪು. ರಾತ್ರಿ ಹೊತ್ತು ಏಕೆ ಬಟ್ಟೆಯನ್ನು ತೊಳೆದು ಒಣಗಾಕಬಾರದು ಅನ್ನೋದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ ನೋಡಿ.
ರಾತ್ರಿ ಬಟ್ಟೆ ಒಣಗಾಕುವುದರಿಂದ ಯಾವ ಸಮಸ್ಯೆಗಳು ಉಂಟಾಗಬಹುದು?
ಕೆಲಸದಲ್ಲಿ ಅಡೆತಡಗಳು
ಸೂರ್ಯ ಮುಳುಗಿದ ಮೇಲೆ ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ. ವಾತಾವರಣದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ರಾತ್ರಿ ಬಟ್ಟೆ ತೊಳೆದು ಮನೆಯ ಹೊರಗೆ ಬಟ್ಟೆ ಒಣಗಾಕಿದರೆ, ಈ ನೆಗೆಟಿವ್ ಎನರ್ಜಿ ಒದ್ದೆ ಬಟ್ಟೆ ಸೇರಿಕೊಳ್ಳುತ್ತದೆ. ಬೆಳಗ್ಗೆ ಅದೇ ಬಟ್ಟೆ ಹಾಕಿಕೊಂಡಾಗ ಆ ನೆಗೆಟಿವ್ ಎನರ್ಜಿ ನಮ್ಮ ಮೇಲೂ ಪ್ರಭಾವ ಬೀರುತ್ತದೆ. ಇದರಿಂದ ಡಿಪ್ರೆಶನ್, ಟೆನ್ಷನ್ ಹಾಗೂ ಭಯ ಕಾಡುತ್ತದೆ. ಮಾಡುವ ಕೆಲಸಗಳಲ್ಲೂ ಅಡೆತಡೆಗಳು ಎದುರಾಗುತ್ತವೆ.
ಹಣದ ಸಮಸ್ಯೆ ಎದುರಾಗುತ್ತೆ!
ಅಲ್ಲದೆ, ರಾತ್ರಿ ಬಟ್ಟೆ ತೊಳೆಯುವುದು ಆರ್ಥಿಕ ಸಮಸ್ಯೆಗೂ ಕಾರಣವಾಗುತ್ತದೆ. ಇದು ಲಕ್ಷ್ಮಿ ದೇವಿಗೆ ಕೋಪ ತರಿಸುತ್ತದೆ. ಪ್ರತಿ ದಿನ ಹೀಗೆ ಮಾಡುವುದರಿಂದ ಮನೆಯಲ್ಲಿ ದರಿದ್ರ ಆವರಿಸುತ್ತದೆ. ಹಣದ ನಷ್ಟ, ಸಾಲದ ಸಮಸ್ಯೆ ಹಾಗೂ ಮನೆಯಲ್ಲಿ ಜಗಳಗಳು ಹೆಚ್ಚಾಗಬಹುದು.
ಬಟ್ಟೆಗಳನ್ನು ಕ್ಲೀನ್ ಆಗಿ ಇಡಲು ಸೂರ್ಯನ ಬಿಸಿಲು ತುಂಬಾ ಮುಖ್ಯ. ಬಿಸಿಲಿನಲ್ಲಿರುವ ಯುವಿ (UV) ಕಿರಣಗಳು ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತವೆ. ಆದರೆ ರಾತ್ರಿ ಬಟ್ಟೆ ಒಣಗಾಕಿದಾಗ ಬಿಸಿಲು ಇರುವುದಿಲ್ಲ. ಹೀಗಾಗಿ ಬಟ್ಟೆಗಳಲ್ಲಿ ತೇವಾಂಶ ಹಾಗೇ ಉಳಿಯುತ್ತದೆ.
ರಾತ್ರಿಯ ಇಬ್ಬನಿಗೆ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಇದರಿಂದ ಬಟ್ಟೆಗಳಲ್ಲಿ ಫಂಗಸ್ ಹಾಗೂ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತವೆ. ಆ ಬಟ್ಟೆಗಳಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇಂತಹ ಬಟ್ಟೆಗಳನ್ನು ಹಾಕಿಕೊಂಡರೆ ಸ್ಕಿನ್ ಅಲರ್ಜಿ, ತುರಿಕೆ ಹಾಗೂ ಕೆಂಪು ಗುಳ್ಳೆಗಳಂತಹ ಸ್ಕಿನ್ ಪ್ರಾಬ್ಲಮ್ಸ್ ಬರಬಹುದು.
ಮನೆಯ ಒಳಗೆ ಬಟ್ಟೆ ಒಣಗಿಸಿ
ಅನಿವಾರ್ಯವಾಗಿ ರಾತ್ರಿಯೇ ಬಟ್ಟೆ ತೊಳೆಯಬೇಕಾದರೆ, ಹೊರಗಡೆ ಕತ್ತಲಲ್ಲಿ ಒಣಗಾಕಬೇಡಿ. ಮನೆಯ ಒಳಗೆ ಫ್ಯಾನ್ ಗಾಳಿಗೆ ಬಟ್ಟೆ ಒಣಗಾಕುವುದು ಸೇಫ್. ಇದರಿಂದ ವಾಸ್ತು ದೋಷವೂ ಇರುವುದಿಲ್ಲ. ಸ್ಕಿನ್ ಪ್ರಾಬ್ಲಮ್ಸ್ ಕೂಡ ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು.
ಮಕ್ಕಳು ಮತ್ತು ವಯಸ್ಸಾದವರ ಬಟ್ಟೆಗಳನ್ನು ರಾತ್ರಿ ಹೊತ್ತು ಅಪ್ಪಿತಪ್ಪಿಯೂ ಹೊರಗಡೆ ಒಣಗಾಕಬಾರದು. ಏಕೆಂದರೆ ಅವರ ಇಮ್ಯೂನಿಟಿ ಪವರ್ ತುಂಬಾ ಕಡಿಮೆ ಇರುತ್ತದೆ. ವಿಜಯವಾಣಿಯ ವರದಿಯ ಪ್ರಕಾರ, ನೆಗೆಟಿವ್ ಎನರ್ಜಿ ಹಾಗೂ ಬ್ಯಾಕ್ಟೀರಿಯಾಗಳು ಇಂಥವರ ಮೇಲೆ ಬೇಗನೆ ಅಟ್ಯಾಕ್ ಮಾಡುತ್ತವೆ. ಇದರಿಂದ ಮಕ್ಕಳಿಗೆ ಪದೇ ಪದೇ ಜ್ವರ, ಶೀತದಂತಹ ಹೆಲ್ತ್ ಪ್ರಾಬ್ಲಮ್ಸ್ ಶುರುವಾಗಬಹುದು.
ಹಾಗೆಯೇ ವಾಷಿಂಗ್ ಮೆಷಿನ್ನಲ್ಲಿ ಬಟ್ಟೆ ತೊಳೆದ ತಕ್ಷಣ ಅದನ್ನು ಹೊರತೆಗೆಯಿರಿ. ಒದ್ದೆ ಬಟ್ಟೆಗಳನ್ನು ಮೆಷಿನ್ನಲ್ಲೇ ರಾತ್ರಿಯಿಡೀ ಹಾಗೆ ಬಿಡುವುದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹಗಲಿನ ಟೈಮ್ನಲ್ಲೇ ಬಟ್ಟೆ ತೊಳೆಯುವ ರೂಢಿ ಮಾಡಿಕೊಳ್ಳುವುದು ನಿಮ್ಮ ಕುಟುಂಬದ ನೆಮ್ಮದಿ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಕೇವಲ ಜ್ಯೋತಿಷ್ಯ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಹಗಲಿನ ಸಮಯದಲ್ಲಿ ಬಟ್ಟೆ ತೊಳೆದು, ಬಿಸಿಲಿನಲ್ಲಿ ಬಟ್ಟೆ ಒಣಗಿಸುವುದು ಬೆಸ್ಟ್.



