ನವದೆಹಲಿ: ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿಘ್ನ ತಂದ ‘ನೀಟ್’ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇದೀಗ ತೀವ್ರ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ. ನವದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನೀಟ್ ಅಕ್ರಮ ವಿರುದ್ಧ ಪ್ರತಿಭಟನೆಗಳು ಜೋರಾಗಿದ್ದು, ಕೇಂದ್ರದ ವೈಫಲ್ಯ, ಧೋರಣೆ ಖಂಡಿಸಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಜುಲೈ 24ರಂದು ಶುಕ್ರವಾರ ಸಂಪೂರ್ಣ ಬಂದ್ಗೆ ಮನವಿ ಮಾಡಿವೆ.

ನೀಟ್ ಪರೀಕ್ಷಾ ವೈಫಲ್ಯ ಖಂಡಿಸಿ ಜುಲೈ 24 ರಂದು ಶಾಲಾ-ಕಾಲೇಜುಗಳ ಬಂದ್ಗೆ ಪ್ರಮುಖ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳು ಕರೆ ನೀಡಿವೆ. ಎಸ್.ಎಫ್.ಐ (SFI), ಎನ್.ಎಸ್.ಯು.ಐ (NSUI), ಎ.ಐ.ಎಸ್.ಎ (AISA), ಡಿ.ವೈ.ಎಫ್.ಐ (DYFI) ಸೇರಿದಂತೆ ಪ್ರಮುಖ ವಿದ್ಯಾರ್ಥಿ ಒಕ್ಕೂಟಗಳು ಕರೆ ನೀಡಿವೆ. ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ಮನವಿ ಮಾಡಿವೆ.



