ಕಾರ್ಕಳ: ಇನ್ಸ್ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಕಾರ್ಕಳ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದ ಯುವಕ ಆಕೆಯೊಂದಿಗೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಂತ್ರಸ್ತ ಯುವತಿಯ ದೂರಿನಂತೆ, ಬಜಗೋಳಿಯ ಸಚಿತ್ ಎಂಬಾತ ಇನ್ಸ್ಟ್ರಾಗ್ರಾಂನಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಪರಿಚಯವಾಗಿದ್ದ. ಬಳಿಕ ಆತ ವಾಟ್ಸಾಪ್ನಲ್ಲಿ ಮಾತನಾಡುತ್ತಿದ್ದ. ಜುಲೈ15ರಂದು ನನ್ನನ್ನು ಕಾರ್ಕಳದ ಬಸ್ ನಿಲ್ದಾಣದ ಮೆಡಿಕಲ್ಗೆ ಬರುವಂತೆ ತಿಳಿಸಿ ಬಳಿಕ ನನ್ನನ್ನು ಕಾರ್ಕಳದ ಕಿಂಗ್ಸ್ ಬಾರ್ಗೆ ಊಟಕ್ಕಾಗಿ ಕರೆದು ಕೊಂಡು ಹೋಗಿದ್ದ. ಕಿಂಗ್ಸ್ ಬಾರ್ನಲ್ಲಿ ನನ್ನೊಂದಿಗೆ ಜಗಳವಾಡಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿ, ಬ್ಲ್ಯಾಕ್ ಮೇಲ್ ಮಾಡಿ ಜೀವಬೆದರಿಕೆ ಒಡ್ಡಿರುತ್ತಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣದ ಬಳಿಕ ಈ ಘಟನೆ ಕೂಡಾ ಸಾಮಾಜಿಕ ವಲಯದಲ್ಲಿ ತಲ್ಲಣ ಮೂಡಿಸಿದೆ.



