ನಾರಾವಿ: ನಾರಾವಿ ಮಾಗಣೆ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು, ಸರ್ವ ಧರ್ಮಾನುರಾಗಿಗಳು ಹಾಗೂ ಪ್ರಮುಖ ದಾನಿಗಳಾದ ಹೊಸ್ಮಾರು ಪ್ರೇಮ್ ಕುಮಾರ್ (ಧರ್ಮ ಶ್ರೀ) ಅವರು ಜೂ.9 ರಂದು ಮುಂಜಾನೆ ಅನಾರೋಗ್ಯದಿಂದಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಇವರು, ತಮ್ಮ ಉದಾರ ದಾನಗುಣ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದರು.
ಮೃತರ ಪಾರ್ಥಿವ ಶರೀರವು ಇಂದು ಮದ್ಯಾಹ್ನ ಹೊಸ್ಮಾರು ಧರ್ಮಶ್ರೀ ಆಗಮಿಸಲಿದ್ದು 12.00 ಗಂಟೆಯಿಂದ 2.00 ಗಂಟೆಯ ತನಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು, ನಂತರ ನೂರಾಳ್ ಬೆಟ್ಟು ಮನೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ.



