ವೇಣೂರು: ಜೂ.1ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ತಾಲೂಕಿನ ಎಲ್ಲ ಶಾಲೆಗಳಲ್ಲಿಯೂ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪೂರ್ವ ಸಿದ್ದತೆ ಮಾಡಿಕೊಳ್ಳಲು ಶಾಲೆಗಳಿಗೆ ಪೋಷಕರು, ಶಿಕ್ಷ ಕರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಶಾಲಾ ಕೊಠಡಿ, ಆವರಣವನ್ನು ಸ್ವಚ್ಛ ಮಾಡುತ್ತಿರುವುದು ಕಂಡು ಬಂತು.
ಬೆಳ್ತಂಗಡಿ ತಾಲೂಕಿ ಬಜಿರೆ ಸರಕಾರಿ ಪಿಯಂಶ್ರೀ ಶಾಲೆಯಲ್ಲಿ ಪೋಷಕರು, ಎಸ್ಡಿಎಂಸಿ ಗುರುವಾರ ಶ್ರಮದಾನ ನಡೆಸಿದರು. ಬೆಳಿಗ್ಗೆಯಿಂದಲೇ ಪೋಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಶಾಲೆಯ ಸ್ವಚ್ಛತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಬಳಿಕ ಶಿಕ್ಷಕರು ತಮ್ಮ ತಮ್ಮ ತರಗತಿಯ ಮಕ್ಕಳ ದಾಖಲಾತಿಯ ಬಗ್ಗೆ ಮಕ್ಕಳು ಪ್ರಾರಂಭದಿಂದಲೇ ಶಾಲೆಗೆ ಮಕ್ಕಳನ್ನು ಕರೆತರುವುದರ ಬಗ್ಗೆ ಚರ್ಚೆ ನಡೆಸುವುದು, ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ದತೆ ಮಡಿಕೊಳ್ಳುತ್ತಿರುವುದು ಎಲ್ಲೆಡೆ ಕಂಡು ಬಂದಿತು.





