ಮಂಗಳೂರು: : ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ನಿಶೆಲ್ ಫ್ಲೋರಾ ಆಲ್ಮೆಡಾ ಅವರು ಆಯ್ಕೆಯಾಗಿರುತ್ತಾರೆ.
ನಿಶೆಲ್ ಫ್ಲೋರಾ ಆಲ್ಮೆಡಾ ಅವರು ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ ನವೀನ್ ಆಲ್ಮೆಡಾ ಹಾಗೂ ಕ್ರಿಸ್ ಎವರ್ಟ್ ಡಿಸೋಜ ದಂಪತಿಯ ಪುತ್ರಿ. ನಿಶೆಲ್ ಅವರು 2016ರಲ್ಲಿ ಮಂಗಳೂರಿನ ಕೊಡಿಯಾಲ್ ಬೈಲ್ ನ ಸಂತ ಎಲೋಶಿಯಸ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಿಶೆಲ್ ಅವರು ಎನ್ಸಿಸಿ ತರಬೇತಿ ಪಡೆದು, ಆರ್ಡಿಸಿ ಕ್ಯಾಂಪ್ ಮೂಲಕ ಗಣರಾಜ್ಯೋತ್ಸವ ಪರೇಡ್ ನಲ್ಲಿ ಶಾಲೆಯನ್ನು ಪ್ರತಿನಿಧಿಸಿದ ಪ್ರಪ್ರಥಮ ವಿದ್ಯಾರ್ಥಿನಿಯಾಗಿದ್ದಾರೆ.
ನಿಶೆಲ್ ಅವರು ನಾಯಕತ್ವ, ನೃತ್ಯ, ಸಂಗೀತ, ಚಿತ್ರಕಲೆ, ಕ್ರೀಡೆ, ಕರಾಟೆ, ಶಿಕ್ಷಣ ಹಾಗೂ ಕಾರ್ಯಕ್ರಮ ನಿರೂಪಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಿಶೆಲ್ ಅವರು ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಉನ್ನತ ಶ್ರೇಣಿ ಪಡೆದು ಸರ್ವಿಸ್ ಸೆಲೆಕ್ಷನ್ ಬೋರ್ಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.





