ಕ್ರೀಡಾಕೂಟದ ಆಯೋಜನೆಯಿಂದ ಸಮುದಾಯದ ಬಲವರ್ಧನೆ: ಸುಮಿತ್ ಸ್ವರ್ಣಡು
ಮಂಗಳೂರು: ಕೊಲ್ಯ ಕುಲಾಲ ಸಂಘ ಇದರ 61ನೇ ವಾರ್ಷಿಕೋತ್ಸವದ ಪ್ರಯುಕ್ತ ಸಮಾಜ ಬಾಂಧವರಿಗೆ ಕುಲಾಲ ಕ್ರೀಡೋತ್ಸವವು ಕೊಲ್ಯ ಶ್ರೀ ರಾಮ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕ್ರೀಡಾಕೂಟವನ್ನು ಕುಲಾಲ ಕುಂಬಾರ ಯುವ ವೇದಿಕೆಯ ಬಂಟ್ವಾಳ ಅಧ್ಯಕ್ಷರಾದ ಸುಮಿತ್ ಸ್ವರ್ಣಡು ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾಕೂಟದ ಆಯೋಜನೆಯಿಂದ ಸಮುದಾಯದ ಬಲವರ್ಧನೆ ಆಗಲಿದೆ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಯ ಸಂಘದ ಅಧ್ಯಕ್ಷರಾದ ಲ.ಅನಿಲ್ ದಾಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಮಂಜೇಶ್ವರ, ಉದ್ಯಮಿ ಶಶಾಂಕ್ ಕೈರಂಗಳ, ದೀಕ್ಷಿತ್ ಕುಲಾಲ್, ಸುನಿಲ್ ತೆವುಲಾ ಮುಂತಾದವರು ಭಾಗವಹಿಸಿದ್ದರು.
ಭಾಸ್ಕರ್ ಕುತ್ತಾರ್, ಸುಲೋಚನಾ ಟೀಚರ್, ಹರಿಣಾಕ್ಷಿ ಮತ್ತು ಆಡಳಿತ ಸಮಿತಿ ಸದಸ್ಯರು, ರಂಜಿತ್ ಉಚ್ಚಿಲ್, ಉದಯ ಕುತ್ತಾರ್, ಜಯಂತ್ ಸಂಕೋಳಿಗೆ, ಕಿಶೋರ್ ಕುತ್ತಾರ್, ರಘುಪತಿ ಕುತ್ತಾರ್ ಉಪಸ್ಥಿತರಿದ್ದರು. ಪ್ರಕಾಶ್ ಪಿಳಿಕೂರ್ ಕಾರ್ಯಕ್ರಮ ನಿರ್ವಹಿಸಿದರು.





