ಬಹುಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಂದ ಗಣನೀಯ ಸಾಧನೆ: ಮಾಜಿ ಸಚಿವ ಬಿ. ರಮಾನಾಥ ರೈ
ಪೆರಿಂಜೆ: ಇಂದು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಕೂಡಾ ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಹೆಚ್ಚಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಯುವಕ-ಯುವತಿಯವರು ಸಾಧನೆ ಮಾಡುತ್ತಿದ್ದು, ಇದಕ್ಕೆಲ್ಲ ಪೂರಕವಾಗಿ ಮೂಡಬಿದ್ರಿ ಹತ್ತಿರದ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಕಾಲೇಜು ತೆರೆದಿರುವುದು ಸಂತಸದ ವಿಚಾರ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಹೊಸಂಗಡಿಯ ಪೆರಿಂಜೆ ಪಟ್ಟಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಹಾಜಿ ಮಲಂಗ್ ಇಂಟರ್ನ್ಯಾಶನಲ್ ಗರ್ಲ್ಸ್ ಕ್ಯಾಂಪಸ್ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಚೇರ್ಮನ್ ಸಯ್ಯದ್ ಅಬ್ದುಲ್ ರಹಿಮಾನ್ ಸಾದತ್ ತಂಗಲ್ ರವರನ್ನು ಹಾಗು ಪಾಲುದಾರ ಉದ್ಯಮಿ ಆಯುಬ್ ಅಹ್ಮದ್ ರವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಕರ್ನಾಟಕ ವಿಧಾನ ಸಭಾ ಸಭಾಪತಿ ಯು.ಟಿ ಖಾದರ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸಾದತ್ ತಂಗಲ್, ಸಂಸ್ಥೆ ಪಾಲುದಾರದ ಅನಿವಾಸಿ ಉದ್ಯಮಿ ಅಯ್ಯೂಬ್ ಅಹ್ಮದ್ ಉಪಸ್ಥಿತರಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಪ್ರಮುಖರಾದ ಮೂಡಾ ಅಧ್ಯಕ್ಷ ಬೇಬಿ ಕುಂದರ್, ಸತೀಶ್ ಕೆ. ಬಂಗೇರ ಕಾಶಿಪಟ್ಣ ಜಯರಾಜ್ ಕಂಬಳಿ ಪೆರಿಂಜೆ ರಾಜ್ಯಗುತ್ತು, ಸೀತಾರಾಮ ರೈ ಪಲ್ಗುಣಿ ಫಾರ್ಮ್ಸ್, ಶಂಕರ್ ಭಟ್ ಬಾಲ್ಯ , ಗಣೇಶ್ ಶೆಟ್ಟಿ ಆರಂಬೋಡಿ ಗ್ರಾ ಪ ಪಿಡಿಒ, ಆನಂದ ಬಂಗೇರ ಕೋಡಿಂಗೇರಿ, ಕಾಂತಪ್ಪ ಪ್ರಭಾರ ಪಿಡಿಒ ಹೊಸಂಗಡಿ ಗ್ರಾ.ಪಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಲಿಯಬ್ಬ ಪುಲಬೆ ಸ್ವಾಗತಿಸಿದರು. ಮಹಮ್ಮದ್ ಎಚ್. ವೇಣೂರು ದನ್ಯವಾದವಿತ್ತರು. ಇಸ್ಮಾಯಿಲ್ ಕೆ ಪೆರಿಂಜೆ, ಖಾಲಿದ್ ಪುಲಾಬೆ, ನಜೀಮ್ ಅಂಗರಕರ್ಯ, ಖಾಲಿದ್ ಹೊಸಂಗಡಿ, ಅಶ್ರಫ್ ಶಾಂತಿನಗರ, ಪುತ್ತು ಮೋನು ಗಾಂಧಿನಗರ, ಇಬ್ರಾಹಿಂ ಪಟ್ಟಾಡಿ, ಹಮೀದ್ ಎಚ್. ಗಾಂದಿನಗರ , ಪುತ್ತು ಕೆ. ಪೆರಿಂಜೆ , ಮುತ್ತಲಿಬ್ ಮೂಡಬಿದ್ರೆ ಹಾಗೂ ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು. ಪತ್ರಕರ್ತ ಅಶ್ರಪ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.





