ವೇಣೂರು: ಬಜಿರೆ ಗ್ರಾಮದ ಪೆರ್ಮಾಣುಗುತ್ತು ಮನೆಯಲ್ಲಿ ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ, ಶ್ರೀ ಬಾಕಿಲ ಬೊಬ್ಬರ್ಯ್ಯ ಹಾಗೂ ಪರಿವಾರ ದೈವಗಳ ನೇಮೋತ್ಸವವು ಮೇ 5ರಂದು ಸಂಜೆ 5-30ರಿಂದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರವರ ದಿವ್ಯ ಉಪಸ್ಥಿತಿಯಲ್ಲಿ, ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯ ತಂತ್ರಿಯವರ ಪೌರೋಹಿತ್ಯದಲ್ಲಿ ಕಟ್ಟುಕಟ್ಟಳೆಯಂತೆ ವಿದ್ಯುಕ್ತವಾಗಿ ನಡೆಯಲಿದೆ ಎಂದು ಪಚ್ಚಾಜೆಗುತ್ತು ಪಿ. ಜಿನರಾಜ ಆರಿಗ ಮತ್ತು ಪೆರ್ಮಾಣುಗುತ್ತು ಸುರೇಶ್ ಆರಿಗ ಅವರು ತಿಳಿಸಿದ್ದಾರೆ.





