ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಏಪ್ರಿಲ್ ತಿಂಗಳ 6ರಿಂದ ಎಸ್ ಎಸ್ ಎಲ್ ಸಿ ತರಗತಿ ಪರೀಕ್ಷೆ ಬರೆದು ಮುಗಿಸಿದವರಿಗೆ ಕನೆಕ್ಟ್ ಕ್ಲಾಸ್ ಗಳು ನಡೆಯಲಿವೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನೆಕ್ಟ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅತ್ಯಂತ ಅನುಭವಿ ಹಾಗೂ ಪರಿಣಿತ ಪ್ರಾಧ್ಯಾಪಕರಿಂದ ತರಗತಿ ಒದಗಿಸಲಾಗುವುದು. ಮಧ್ಯಾಹ್ನದ ಊಟ ಉಚಿತವಾಗಿರುತ್ತದೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಭಾಗಗಳಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9880899769/ 8867242769 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.
ಯಾವುದೇ ಶಾಲೆಯ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹಾಜರಾಗಬಹುದು. ನೀಟ್/ಜೆ ಇ ಇ ಮೈನ್ಸ್ ಮತ್ತು ಅಡ್ವಾನ್ಸ್ / ಸಿ ಇ ಟಿ / ನಾಟಾ/ಎನ್ ಡಿ ಎ/ ಸಿ ಎ/ಸಿ ಎಸ್/ ಕ್ಲಾಟ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಹೋಗಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫೌಂಡೇಶನ್ ತರಗತಿ ಇದಾಗಲಿದೆ. ಸಂಪೂರ್ಣ ಉಚಿತವಾಗಿ ನಡೆಯಲಿರುವ ಎಕ್ಸೆಲ್ ಕನೆಕ್ಟ್ ತರಗತಿಗಳು ಎಕ್ಸೆಲ್ ಬೆಳಕು ಫೌಂಡೇಶನ್ ನ ಸಮಾಜಮುಖಿ ಚಟುವಟಿಕೆಗಳ ಪೈಕಿ ಒಂದಾಗಿದೆ.





