ವೇಣೂರು: ವೇಣೂರು ಮಹಾವೀರ ನಗರಕ್ಕೆ ಸನಿಹದ ರಸ್ತೆ ಬದಿ ಕೊಳವೆಬಾವಿಯೊಂದು ಬಾಯ್ತೆರೆದುಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ!
ನೆಲದಿಂದ ಒಂದು ಅಡಿಯಷ್ಟು ಮೇಲೆ ಕಬ್ಬಿಣದ ಕೊಳವೆ ಇದೆ. ಅಷ್ಟೇನೂ ಅಪಾಯ ಅಲ್ಲದಿದ್ದರೂ ರಸ್ತೆ ಬದಿಯಲ್ಲೇ ಬಾಯ್ತೆರೆದುಕೊಂಡಿದ್ದು, ಪುಟ್ಟ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ. ವೇಣೂರು ಪೆಟ್ರೋಲ್ ಪಂಪ್ ಮುಂಭಾಗದ ಕೆರೆಕೋಡಿ-ಅಳದಂಗಡಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲೇ ಈ ಕೊಳವೆಬಾವಿ ಇದೆ.
ತೆರೆದ ಕೊಳವೆಬಾವಿ ರಾಜ್ಯ, ದೇಶದಲ್ಲೇ ಬಹಳಷ್ಟು ಅವಘಡ ಸೃಷ್ಟಿಸಿದ್ದು, ಈ ಬಗ್ಗೆ ಸರಕಾರ, ಇಲಾಖೆಗಳು ಕಟ್ಟುನಿಟ್ಟಿನ ಆದೇಶಗಳನ್ನೂ ನೀಡಿರುತ್ತದೆ. ನಿರುಪಯುಕ್ತ ಕೊಳವೆಬಾವಿ ಇದಾಗಿದ್ದು, ಸ್ಥಳೀಯಾಡಳಿತ ತಕ್ಷಣ ಗಮನ ಹರಿಸಬೇಕಿದೆ.





