ಮ೦ಗಳೂರು: ಮೆಸ್ಕಾಂ ಮೂಡಬಿದ್ರೆ ಉಪವಿಭಾಗ ಕಚೇರಿಯಲ್ಲಿ ಮಾ.17 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.
ಮೆಸ್ಕಾಂನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಲು ಕೋರಲಾಗಿದೆ. ದೂರವಾಣಿ ಕರೆಯ ಮುಖಾಂತರವೂ ಸಂಪರ್ಕಿಸಿ, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎ೦ದು ಮೆಸ್ಕಾ೦ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08258-295051.





