ವೇಣೂರು: ವೇಣೂರು ಶ್ರೀ ದಿಗಂಬಗರ ಜೈನ ತೀರ್ಥ ಕ್ಷೇತ್ರ ಸಮಿತಿ ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ನೀಡಿ ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ್ದ ಬಜಿರೆ ಗ್ರಾಮದ ಸುರಭಿ ಮನೆ ಬಿ. ರತ್ನವರ್ಮ ಇಂದ್ರ ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ವೇಣೂರು ಮಂಡಲ ಪ್ರಧಾನರಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದರು. ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ನೀಡಿ ಬಡವರ ಏಳಿಗೆಗೆ ಶ್ರಮಿಸಿದ್ದರು. ವೇಣೂರು ಜೈನ್ ಮಿಲನ್ ಅಧ್ಯಕ್ಷರಾಗಿಯೂ ಸೇವೆ ನೀಡಿದ್ದ ಇವರು, ದಿಗಂಬಗರ ಜೈನ ತೀರ್ಥ ಕ್ಷೇತ್ರ ಸಮಿತಿ ಕೋಶಾಧಿಕಾರಿಯಾಗಿದ್ದರು. ೨೦೧೩ ಮಹಾಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿಯಾಗಿ, ೨೦೨೪ ರ ಉಪಾಧ್ಯಕ್ಷರಾಗಿ ದುಡಿದು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ್ದರು.
ಬಿ. ರತ್ನವರ್ಮ ಇಂದ್ರ ಅವರು ಉಜಿರೆ ಎಸ್ಡಿಎಂ ಕಾಲೇಜಿನ ಪಿಯು ಪ್ರಾಂಶುಪಾಲ ಪ್ರಮೋದ್ ಕುಮಾರ್, ಮೂಡಬಿದಿರೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಸುಧೀರ್ ಕುಮಾರ್ ಸೇರಿದಂತೆ ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.





