ವೇಣೂರು: ರಾಷ್ಟ್ರಸೇವಿಕಾ ಸಮಿತಿ ಪುತ್ತೂರು ಜಿಲ್ಲೆ, ಮಂಗಳೂರು ವಿಭಾಗದ ವತಿಯಿಂದ ಗಣವೇಷಧಾರಿ ಸೇವಿಕೆಯರಿಂದ ಪಥ ಸಂಚಲನವು ಜ. 17ರಂದು ಸಂಜೆ 3-00 ಗಂಟೆಯಿಂದ ವೇಣೂರು ಶ್ರೀರಾಮ ಭಜನ ಮಂದಿರದಿಂದ ಹೊರಟು ಮಹಾವೀರ ನಗರದ ಭರತೇಶ ಸಭಾಭವನದಲ್ಲಿ ಸಂಪನ್ನಗೊಳ್ಳಲಿದೆ.
ಬಳಿಕ ಭರತೇಶ ಸಭಾಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ವಿದ್ಯೋದಯ ಆಂಗ್ಲಮಾಧ್ಯಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶೀಲಾ ಎಸ್. ಹೆಗ್ಡೆ ವಹಿಸಲಿದ್ದು, ಪುತ್ತೂರು ಜಿಲ್ಲಾ ರಾಷ್ಟ್ರಸೇವಿಕಾ ಸಮಿತಿಯ ಜಿಲ್ಲಾ ಬೌದ್ಧಿಕ್ ಪ್ರಮುಖ್ ಶ್ರೀಮತಿ ಪ್ರತಿಭಾ ಬೌದ್ದಿಕ್ ನೀಡಲಿದ್ದಾರೆ ಎಂದು ರಾಷ್ಟ್ರಸೇವಿಕಾ ಸಮಿತಿ ಜಿಲ್ಲಾ ಕಾರ್ಯವಾಹಿಕ ಶ್ರೀಮತಿ ವೇದಾವತಿ ಜನಾರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






