ಕುಕ್ಕೇಡಿ: ಬಹುಕಾಲದ ಬೇಡಿಕೆಯಾಗಿದ್ದ ಕುಕ್ಕೇಡಿ ಗ್ರಾಮದ ಕಾಜಲದ ಕುಡ್ಪೋಲೊಕ್ಕು ಎಂಬಲ್ಲಿ ಕಾಲುಸಂಕ ರಚನೆಗೆ ರೂ. 25 ಲಕ್ಷ ವಿಶೇಷ ಅನುದಾನ ಮಂಜೂರುಗೊಂಡಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶೇಖರ ಕುಕ್ಕೇಡಿ ತಿಳಿಸಿದ್ದಾರೆ.
ಅನುದಾನ ಬಿಡುಗಡೆ ಮಾಡಿದ ಸಚಿವ ಸತೀಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅನುದಾನ ತರುವಲ್ಲಿ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.






