ಮಂಗಳೂರು: ಕೆಟ್ಟು ನಿಂತಿದ್ದ ಲಾರಿ ಹಿಮ್ಮುಖ ಚಲಿಸಿ ಕಂದಕಕ್ಕೆ ಉರುಳಿದ ಘಟನೆ ಮಂಗಳೂರಿನ ಕೆ.ಪಿ.ಟಿ ಬಳಿಯ SKS ಅಪಾರ್ಟ್ಮೆಂಟ್ ಬಳಿ ಶನಿವಾರ ನಡೆದಿದೆ.
ಲಾರಿ ಚಾಲಕ ಹೊರಗಡೆ ಹೋಗಿದ್ದು ಬರುವಷ್ಟರಲ್ಲಿ ಲಾರಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಉರುಳಿದೆ. ಹಿಮ್ಮುಖ ಚಲಿಸುವ ವೇಳೆ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಬಾರಿ ಅನಾಹುತ ತಪ್ಪಿದಂತಾಗಿದೆ.






