ಕುಕ್ಕೇಡಿ: ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸೇವಾ ಸಂಘ (ರಿ.) ಕುಂಡದಬೆಟ್ಟು-ಕುಕ್ಕೇಡಿ-ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಹಾಗೂ ಯುವವಾಹಿನಿ ಸಂಚಾಲನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಗುರುಜಯಂತಿ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಡಿ. 14ರಂದು ಬೆಳಿಗ್ಗೆ 8-30ರಿಂದ ಕುಕ್ಕೇಡಿ ಇಂದಿರಾಗಾಂಧಿ ಕ್ರೀಡಾಂಗಣದ ಬಳಿಯಿರುವ ಸಂಘದ ನಿವೇಶನದಲ್ಲಿ ನಡೆಯಲಿದೆ.






