ವೇಣೂರು: ಇಲ್ಲಿಯ ಮಹಾವೀರ ನಗರದ ಪದ್ಮಾಂಬ ಕಾಂಪ್ಲೆಕ್ಸ್ನಲ್ಲಿ ನ. 26ರಂದು ಸಂಜೆ ಮಾಣಿಕ್ಯರಾಜ್ ಜೈನ್ ಕೋರಂಜ ಕೋರಂಜ ಮಾಲಕತ್ವದಲ್ಲಿ ಕಲ್ಪವೃಕ್ಷ ಜೈನ್ ರೆಸ್ಟೋರೆಂಟ್ ಉದ್ಘಾಟನೆಗೊಂಡಿತು.
ವೇಣೂರಿನ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಮಾಣಿಕ್ಯರಾಜ್ ಜೈನ್ ಕೋರಂಜ ಕುಟುಂಬಸ್ಥರು, ಆತ್ಮೀಯರು ಉಪಸ್ಥಿತರಿದ್ದರು.
ಪ್ರತಿದಿನ ವಿಶಿಷ್ಟ ಬಗೆಯ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶುದ್ಧ ಸಸ್ಯಹಾರಿ ಊಟ, ಉಪಹಾರಗಳು, ಚಾಟ್ಸ್, ಸ್ವೀಟ್ಸ್,ಚೈಸ್ ಫುಡ್ಗಳು ಲಭ್ಯವಾಗಲಿದೆ. ಯಾವುದೇ ಕಾರ್ಯಕ್ರಮಗಳ ಕ್ಯಾಟರಿಂಗ್ ವ್ಯವಸ್ಥೆಗೂ ಇಲ್ಲಿ ಆರ್ಡರ್ ಪಡೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಮಾಣಿಕ್ಯರಾಜ್ ಜೈನ್ ತಿಳಿಸಿದ್ದಾರೆ.





