ಬೆಳ್ತಂಗಡಿ: ತಾಲೂಕಿನ ಬೆಳಾಲು ಪರಿಸರದಲ್ಲಿ ಕಾಡುಕೋಣ ಸಂಚಾರ ಕಂಡು ಬಂದಿದೆ.
ಉಜಿರೆ – ಬೆಳಾಲು -ಬಂದಾರು ಮುಖ್ಯರಸ್ತೆಯ ಬೆಳಾಲು ಗ್ರಾಮ ಕಾಡಂಡ ಬಳಿ ಗೇರುತೋಟದಲ್ಲಿ ಪ್ರತ್ಯಕ್ಷಗೊಂಡಿದೆ. ಹಲವಾರು ತಿಂಗಳುಗಳಿಂದ ಆ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಅಡಿಕೆ ಇನ್ನಿತರ ಕೃಷಿ, ಕೃಷಿಗೆ ಅಳವಡಿಸಿರುವ ನೀರಾವರಿ ಪೈಪ್ ಗಳಿಗೆ ಹಾನಿಯಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಇಲ್ಲಿಯ ಕೃಷಿಕರು ಕಾಡುಕೋಣದ ಹಾವಳಿಯ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ. ಜೀಪುವಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಕಾಡುಕೋಣ ಕಂಡು ಬಂದಿದ್ದು, ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಕೃತಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.





