ಭಾರತೀ ಕಲಾ ಮಂಟಪದ ಲೋಕಾರ್ಪಣೆ, ಸಂಯುಕ್ತ ವಾರ್ಷಿಕೋತ್ಸವ
ವೇಣೂರು: ಸೇವಾ ಶರಧಿ ವಿಶ್ವಸ್ತ ಮಂಡಳಿ ಇದರ ರಜತ ವರ್ಷದ ಸವಿನೆನಪಿಗಾಗಿ ನಿರ್ಮಿಸಲಾದ ಭಾರತೀ ಕಲಾ ಮಂಟಪದ ಲೋಕಾರ್ಪಣೆ ಹಾಗೂ ಮಹಿಳಾ ಹಾಗೂ ಯುವತಿ ಮಂಡಲದ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭವು ಜ. 11ರಂದು ವೇಣೂರು ಮಹಿಳಾ ಮಂಡಲದ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ10೦ ಗಂಟೆಗೆ ನೂತನ ಭಾರತೀ ಕಲಾ ಮಂಟಪದ ಲೋಕಾರ್ಪಣೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಗುಂಡೂರಿ ಸೂರ್ಯಪುರದ ಕೆ. ಸುಂದರ್ ರಾವ್ ಅವರು ನೆರವೇರಿಸಲಿದ್ದಾರೆ.
ಸೇವಾ ಶರಧಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ಕೆ. ಭಾಸ್ಕರ ಪೈ ಅವರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸೇವಾ ಭಾರತಿ ಕಾರ್ಯದರ್ಶಿ ಕೆ. ಚೆನ್ನಯ್ಯ ಸ್ವಾಮಿ ಪ್ರಮುಖ ಭಾಷಣ ಮಾಡಲಿದ್ದಾರೆ. ಬದ್ಯಾರು ಹಂಸಗಿರಿ ಅಕ್ಕಿಗಿರಣಿಯ ಶಶಿಕಾಂತ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಅಪರಾಹ್ನ 3-00 ಗಂಟೆಗೆ ನಡೆಯಲಿರುವ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕ ತರಬೇತಿ ಸಂಸ್ಥೆ ವೇಣೂರು ಇದರ ಸಹಪ್ರಾಧ್ಯಾಪಕ ನಾಗೇಶ್ ಉಡುಪ ವಹಿಸಲಿದ್ದಾರೆ. ಕು. ಅಕ್ಷಯಾ ಗೋಖಲೆ ಕಾರ್ಕಳ ಪ್ರಮುಖ ಭಾಷಣ ಮಾಡಲಿದ್ದು, ಮೂಡುಬಿದಿರೆ ಧನಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕರಾದ ಶ್ರೀಪತಿ ಭಟ್, ಶ್ರೀಮತಿ ರಾಜೇಶ್ವರಿ ವಿ. ಅಧಿಕಾರಿ ಮಾರಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಲಿ ದ್ದಾರೆ. ಕು. ಋತ್ವಿ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.





