ನ. 27ರಂದು ಶುಭಾರಂಭ, ಪಾಕ ತಜ್ಞ ಮಾಣಿಕ್ಯರಾಜ್ ಜೈನ್ ನೇತೃತ್ವ
ವೇಣೂರು: ವೇಣೂರು ಪರಿಸರದ ಜನತೆಗೊಂದು ಸಂತಸದ ಸುದ್ದಿಯೊಂದಿದೆ. ಕ್ಯಾಟರಿಂಗ್ ಸರ್ವಿಸಸ್ನಲ್ಲಿ ಮೆಚ್ಚುಗೆ ಗಳಿಸಿರುವ ಮಾಣಿಕ್ಯ ರಾಜ್ ಜೈನ್ ಕೋರಂಜ ಅವರ ಆಡಳಿತದಲ್ಲಿ ವೇಣೂರು ಮಹಾವೀರ ನಗರದಲ್ಲಿರುವ ಪದ್ಮಾಂಬ ಕಾಂಪ್ಲೆಕ್ಸ್ನಲ್ಲಿ ನ. 27ರಂದು ಕಲ್ಪವೃಕ್ಷ ಜೈನ್ ರೆಸ್ಟೋರೆಂಟ್ ಶುಭಾರಂಭವಾಗಲಿದೆ.

ಪ್ರತಿದಿನ ವಿಶಿಷ್ಟ ಬಗೆಯ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶುದ್ಧ ಸಸ್ಯಹಾರಿ ಊಟ, ಉಪಹಾರಗಳು, ಚಾಟ್ಸ್, ಸ್ವೀಟ್ಸ್,ಚೈನೀಸ್ ಫುಡ್ಗಳು ಲಭ್ಯವಾಗಲಿದೆ. ಯಾವುದೇ ಕಾರ್ಯಕ್ರಮಗಳ ಕ್ಯಾಟರಿಂಗ್ ವ್ಯವಸ್ಥೆಗೂ ಇಲ್ಲಿ ಆರ್ಡರ್ ಪಡೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಮಾಣಿಕ್ಯರಾಜ್ ಜೈನ್ ತಿಳಿಸಿದ್ದಾರೆ.





