ದೇಶದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಬಿತ್ತುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಲಿ: ಶಾಸಕ ಹರೀಶ್ ಪೂಂಜ
ವೇಣೂರು: ದೇಶದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಬಿತ್ತುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಕೇವಲ ಸರ್ಟಿಫಿಕೆಟ್ ಆಧರಿತ ಶಿಕ್ಷಣದ ವ್ಯವಸ್ಥೆಯಲ್ಲಿ ಬದುಕಿದರೆ ಪೋಷಕರು ಆಶ್ರಮ ಸೇರಬಹುದಾದ ಪರಿಸ್ಥಿತಿ ಬರಬಹುದು. ಅಂದು ಗುರುಕುಲದಲ್ಲಿ ನಡೆಯುತ್ತಿದ್ದ ಗುರುಕುಲ ಪದ್ದತಿಯ ಶಿಕ್ಷಣ ವ್ಯವಸ್ಥೆ ಇಂದು ಕುಂಭಶ್ರೀಯಲ್ಲಿ ನಡೆಯುತ್ತಿದೆ. ಜನ್ಮ ನೀಡಿ ಪೋಷಿಸುವ ಮಾತಾ-ಪಿತಾರನ್ನು ಹಾಗೂ ಜೀವನಕ್ಕೆ ಶಕ್ತಿ, ಜ್ಞಾನದ ಧಾರೆಯನ್ನು ಎರೆಯುವ ಗುರುವನ್ನು ನೆನೆಯುವ ವಿಶಿಷ್ಯಪೂರ್ಣ ಕಾರ್ಯಕ್ರಮ ಕುಂಭಶ್ರೀ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜ. ೬ರಂದು ವೇಣೂರು ನಿಟ್ಟಡೆಯ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಮಾತಾ-ಪಿತಾ ಗುರುದೇವೋಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿ ಸರಕಾರಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್ ಎಂಆರ್ಪಿಎಲ್ ಅನುದಾನದಡಿ ನಿರ್ಮಾಣಗೊಂಡಿರುವ ಮೋಟೆಸರಿ ತರಗತಿ ಕೊಠಡಿಯನ್ನು ಉದ್ಘಾಟಿಸಿದರು.
ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಅಧ್ಯಕ್ಷತೆ ವಹಿಸಿ, ಶಾಲೆ ರಾಜ್ಯ, ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳಲು ಇಲ್ಲಿ ಶಿಕ್ಷಣ ನೀಡಿದ ಶಿಕ್ಷಕ ವೃಂದ ಹಾಗೂ ಸಾಧನೆಗೈದಿರುವ ಮಕ್ಕಳೇ ಕಾರಣ ಎಂದರು.
ಕುಂಭಶ್ರೀ ಸಂಸ್ಥೆಯ ಪೋಷಕಿ ಶ್ರೀಮತಿ ಉಷಾ ಗಿರೀಶ್, ಮಂಗಳೂರು ಮೋಕ್ಷಿತ್ ಅರ್ಥ್ ಮೂವರ್ಸ್ನ ಮಾಲಕ ಜಯರಾಮ್ ಕುಲಾಲ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಬೆಳ್ತಂಗಡಿ, ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ಶ್ರೀಧರ್ ಶೆಟ್ಟಿ, ವೇಣೂರು ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಗುಣವತಿ ಡಿ., ಕುಂಡದಬೆಟ್ಟು ಅಂಗನವಾಡಿ ಶಿಕ್ಷಕಿ ಜಯಶ್ರೀ, ಕುಂಡದಬೆಟ್ಟು ಮಂಜುಶ್ರೀ ಭಜನ ಮಂಡಳಿ ಅಧ್ಯಕ್ಷ ಆನಂದ ಟೈಲರ್, ಕುಕ್ಕೇಡಿ ಹಾಲು ಉ.ಸ.ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಕರಿಮಣೇಲು ಸಂತ ಜೂಡರ ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಲೀನಾ ಮರ್ಸಲಿನ್, ಮಂಗಳತೇರು ಅಂಗನವಾಡಿ ಶಿಕ್ಷಕಿ ಪ್ರಮೀಳ, ವೇಣೂರು ಭಾರತೀ ಶಿಶು ಮಂದಿರದ ಮಾತಾಜಿ ಹೇಮಾ ಶ್ರೀಧರ್ ಕುಲಾಲ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಮಮತಾ ಶಾಂತಿ, ಶೈಕ್ಷಣಿಕ ಸಲಹೆಗಾರ ಮನೋಜ್ ಎಸ್., ಪ್ರಾಂಶುಪಾಲೆ ಓಮನಾ ಎಂ.ಎ., ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಿಕಿ ಶುಭ ನಿತೇಶ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರುಗಳಾದ ಚಂದ್ರಶೇಖರ್, ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಪ್ರಾಸ್ತಾವಿಸಿ, ಸ್ವಾಗತಿಸಿದರು.
ಸನ್ಮಾನ
ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಮಾಲಾಡಿ ಗ್ರಾ.ಪಂ. ಸದಸ್ಯರಾದ ದಿನೇಶ್ ಎಸ್. ಸೋಣಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಕ್ಕಳು ದೊಡ್ಡವರಾದಂತೆ ಹೆತ್ತವರ ಸಂಬಂಧದಿಂದ ದೂರವಾಗುತ್ತಾರೆ. ಸಂಬಂಧದ ಭಾವನೆ ಕಡಿಮೆಯಾಗತೊಡಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವಂತೆ ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಈ ರೀತಿಯ ಸಂಸ್ಕಾರಭರಿತ ಶಿಕ್ಷಣ ದೊರೆತಾಗ ಆಶ್ರಮಗಳ ಅಗತ್ಯತೆ ಕಡಿಮೆಯಾಗತೊಡಗುತ್ತದೆ. ಗುರುಕುಲದ ಕಲ್ಪನೆಯಲ್ಲಿ ಉದಾತ್ತ ಭಾವನೆಯೊಂದಿಗೆ ನಮ್ಮ ಮನೆಯ ಮಕ್ಕಳಿಗೆ ಸಂಸ್ಕಾರ ಬಿತ್ತುವ ಕೆಲಸ ಕುಂಭಶ್ರೀಯಿಂದ ನಡೆಯುತ್ತಿದೆ.
ಹರೀಶ್ ಪೂಂಜ, ಶಾಸಕರು
ಮಾತಾ ಪಿತಾ ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ
ಮಂಗಳೂರಿನ ಎಲ್ಐಸಿ ಮಾರ್ಗದರ್ಶಕಿ ರೇಖಾ ಚಂದ್ರಹಾಸ್ ಕೋಟೆಕಾರ್, ಕುಂಭಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭವಾನಿ ದಿವ್ಯಾ ಹೃದಯಸ್ಪರ್ಶಿ ಮಾತುಗಳನ್ನಾಡಿದರು. ಜೀವನದಲ್ಲಿ ತಾಯಿ, ತಂದೆ ಹಾಗೂ ಗುರುವಿನ ಪಾತ್ರದ ಮಹತ್ವವನ್ನು ತಿಳಿಸುವ ಮಾತಾ ಪಿತಾ ಗುರುದೇವೋಭವ ಎಂಬ ಹೃದಯಸ್ಪರ್ಶಿ ಎಂಬ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹತ್ತನೇ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೆತ್ತವರಿಗೆ ಆರತಿ ಬೆಳಗಿಸಿ ಪೂಜಿಸಿದರು. ವಿದ್ಯಾರ್ಥಿಗಳು ಹೆತ್ತವರ ಪಾದಸ್ಪರ್ಶ ಮಾಡಿದಾಗ ಹೆತ್ತವರ ಕಣ್ಣಂಚಿನಿಂದ ಆನಂದಭಾಸ್ಮ ಹರಿಯಿತು. ಹೆತ್ತವರ ಕ್ಷಮಾಭಾವನೆ ಮತ್ತು ಪೂಜೆಯಿಂದ ಸಂಪೂರ್ಣ ಜ್ಞಾನ ಮತ್ತು ಮುಕ್ತಿ ಸಿಗುತ್ತದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಸಂಚಲನ ಆಯಿತು. ಇದು ಕೇವಲ ಪದಗಳ ಸಾಲುಗಳಲ್ಲ, ಬದಲಿಗೆ ಜೀವನದ ಒಂದು ಪವಿತ್ರ ಮಾರ್ಗವನ್ನು ತೋರಿಸುವ ತತ್ವವಾಗಿದೆ.
ಸಂಸ್ಥಾಪಕರ ದಿನಾಚರಣೆ
ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನೂ ಈ ಸಂದರ್ಭದಲ್ಲಿ ಆಚರಿಸಲಾಯಿತು.
ಸಂಚಾಲಕ ಅಶ್ವಿತ್ ಕುಲಾಲ್ ಮಾತನಾಡಿ, ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಹಾಕಿದ ಗಟ್ಟಿಯಾದ ಬುನಾದಿ ಇಂದು ಶಾಲೆ ಇಷ್ಟು ಎತ್ತರ ಬೆಳೆದಿದೆ. ಪುತ್ರನಾಗಿ ಹೆಮ್ಮೆಯ ತಂದೆ, ಶಿಷ್ಯನಾಗಿ ಎತ್ತರ ಸ್ಥಾನದಲ್ಲಿ ಗುರು, ತಿದ್ದಿ ದಾರಿತೋರಿಸುವ ಮಾರ್ಗದರ್ಶನ ನೀಡುವ ಗಿರೀಶ್ ಕೆ.ಚ್. ಅವರ ಅವಿರತ ಶ್ರಮ ಮರೆಯಲಾಗದು. ಎಸ್ಎಸ್ಎಲ್ಸಿ ೧೨ ಬಾರಿ ಹಾಗೂ ಪಿಯುಸಿಯಲ್ಲಿ ಸತತ ೪ವರ್ಷ ಶೇ. ೧೦೦ ಫಲಿತಾಂಶ ತಂದ ವಿದ್ಯಾಸಂಸ್ಥೆ ಇದು ಎಂದರು.
ಸಂಸ್ಥಾಪಕ ಗಿರೀಶ್ ಕೆ.ಎಚ್. ಅವರು ಅನಿಸಿಕೆ ವ್ಯಕ್ತಪಡಿಸಿ, ಗುಡ್ಡದಂತಿದ್ದ ಈ ಪ್ರದೇಶ ಪುಟ್ಟ ಮಕ್ಕಳ ನಿರಂತರ ಪಾದಸ್ಪರ್ಶದಿಂದ ಇದು ಬೆಳಗಿದೆ. ಸಂಸ್ಥೆಯು ರಾಜ್ಯ, ರಾಷ್ಟಮಮಟ್ಡದ ಸಾಧನೆಗೆ ಇಲ್ಲಿ ವಿದ್ಯೆ ನೀಡಿದ ಶಿಕ್ಷಕರು ಹಾಗೂ ವಿದ್ಯೆ ಪಡೆದ ವಿದ್ಯಾರ್ಥಿಗಳೇ ಕಾರಣ ಎಂದರು. ಅಶ್ವಿತ್ ಕುಲಾಲ್, ಚಂದ್ರಶೇಖರ್ ಅನಿಸಿಕೆ ವ್ಯಕ್ತಪಡಿಸಿದರು.





