ವೇಣೂರು: ಇಲ್ಲಿನ ಎಕ್ಸೆಲ್ ಟೆಕ್ಕೋ ಸ್ಕೂಲ್ ಇದರ 2025 -26 ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಇವರು ಮಾ.13ರಂದು ಮಾರ್ಗದರ್ಶನ ಮಾಡಿದರು.
ಶಾಲೆಯ ವಿದ್ಯೋದಯ ಕ್ಯಾಂಪಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಿ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸಿ ಮಾತನಾಡಿದ ಅವರು, 10ನೇ ತರಗತಿಯ ಪರೀಕ್ಷೆ ಎಂಬುದು ವಿದ್ಯಾರ್ಥಿ ಜೀವನದ ಸತ್ವ ಪರೀಕ್ಷೆಯ ಕಾಲ. ಮುಂದಿನ ಉನ್ನತ ವ್ಯಾಸಂಗಕ್ಕೆ ಇದೇ ಭದ್ರ ಅಡಿಪಾಯ. ಹಾಗಾಗಿ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.





