ವೇಣೂರು: ಅಕ್ರಮ ಬ್ಯಾನರ್ ವಿರುದ್ದ ಕೊನೆಗೂ ಪಂಚಾಯತ್ ಫೀಲ್ಡ್ಗಿಳಿದಿದೆ. ಪರಿಣಾಮ ಹತ್ತಾರು ಬ್ಯಾನರ್ ಜಾಹೀರಾತುದಾರರು ಪಂಚಾಯತ್ಗೆ ಆಗಮಿಸಿ ಲೈಸನ್ಸ್ ಪಡೆದುಕೊಂಡಿದ್ದಾರೆ.
ವೇಣೂರು ಗ್ರಾ.ಪಂ.ನ ವೇಣೂರು ಪೇಟೆಯಲ್ಲಿ ಅಕ್ರಮ ಬ್ಯಾನರ್ ರಾರಾಜಿಸುತ್ತಿದ್ದ ಬಗ್ಗೆ ನ್ಯೂಸ್ ೧೯ ಕನ್ನಡ ಇಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಫೀಲ್ಡ್ಗಳಿದ ಪಂಚಾಯತು ಅಕ್ರಮ ಬ್ಯಾನರ್ ಅಳವಡಿಸಿದವರನ್ನು ಸಂಪರ್ಕಿಸಿ ಲೈಸನ್ಸ್ ಪಡೆಯದಿದ್ದರೆ ತೆರವುಗೊಳಿಸುವ ಎಚ್ಚರಿಕೆ ನೀಡಿತ್ತು. ತಕ್ಷಣ ಜಾಹೀರಾತುದಾರರು ಆಗಮಿಸಿ ಪಂಚಾಯತ್ಗೆ ತೆರಿಗೆ ನೀಡಿ ಲೈಸನ್ಸ್ ಪಡೆದುಕೊಂಡಿದ್ದಾರೆ. ಲೈಸನ್ಸ್ ಪಡೆಯದ ಬ್ಯಾನರನ್ನು ಪಂಚಾಯತು ತೆರವುಗೊಳಿಸಿದ್ದು, ಪಂಚಾಯತ್ನ ತುರ್ತು ಸ್ಪಂದನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.





